

ಫ್ರಾನ್ಸ್: ಕೊರೊನಾ ವೈರಸ್ ಭೀತಿ ಇಡೀ ಜಗತ್ತಿಗೇ ಆವರಿಸಿದೆ. ಈ ಕಾರಣದಿಂದ ಮಾಸ್ಕ್ ಎಂಬುದು ಬಹುದೊಡ್ಡ ಅಗತ್ಯವಾಗಿ ಪರಿಣಮಿಸಿದೆ.
ಸದ್ಯದ ಮಟ್ಟಿಗೆ ಪ್ರತಿಯೊಬ್ಬರ ಬೇಡಿಕೆಯಾದ ಮಾಸ್ಕ್ ಕೂಡ ಕಳವಾಗುತ್ತಿದೆ. ಈಗ ದಕ್ಷಿಣ ಫ್ರೆಂಚ್ನ ಮಾರ್ಸಿಲ್ಲೆ ನಗರದ ಆಸ್ಪತ್ರೆಯೊಂದರಿಂದ ಬರೋಬ್ಬರಿ 2000 ಸರ್ಜಿಕಲ್ ಮಾಸ್ಕ್ಗಳು ಕಳುವಾಗಿದ್ದಾಗಿ ವರದಿಯಾಗಿದೆ. ಇವೆಲ್ಲ ಶಸ್ತ್ರಚಿಕಿತ್ಸೆ ಸಮಯದಲ್ಲಿ ಬಳಸುವ ಮಾಸ್ಕ್ಗಳಾಗಿದ್ದು, ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಮತ್ತು ಅಲ್ಲಿನ ವೈದ್ಯರ ಬಳಕೆಗಾಗಿ ಇಡಲಾಗಿತ್ತು.
ಸರ್ಜಿಕಲ್ ಮಾಸ್ಕ್ಗಳು ಕಳವಾದ ಬೆನ್ನಲ್ಲೇ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಫೇಸ್ ಮಾಸ್ಕ್ಗಳ ಉತ್ಪಾದನೆ ಹಾಗೂ ಸಂಗ್ರಹ ಹೆಚ್ಚಾಗಬೇಕು ಎಂದು ಆರೋಗ್ಯ ಇಲಾಖೆ, ಸಂಸ್ಥೆಗಳಿಗೆ ತಿಳಿಸಿದ್ದಾರೆ.
ಮಾಸ್ಕ್ಗಳ ಕೊರತೆ ಆದರೆ ಹೀಗೆ ಕಳವಾಗುವ ಪ್ರಮಾಣವೂ ಹೆಚ್ಚಾಗುತ್ತದೆ. ಇದರಿಂದಾಗಿ ನಿಜಕ್ಕೂ ಅಗತ್ಯ ಇರುವವರಿಗೆ ಪೂರೈಕೆ ಆಗುವುದಿಲ್ಲ ಎಂದಿದ್ದಾರೆ.
ಫ್ರಾನ್ಸ್ನಲ್ಲಿ ಕೊರೊನಾ ವೈರಸ್ನಿಂದ ನಾಲ್ವರು ಮೃತಪಟ್ಟಿದ್ದು, ಒಟ್ಟು 204 ಜನರಲ್ಲಿ ಸೋಂಕು ದೃಢಪಟ್ಟಿದೆ. (ಏಜೆನ್ಸೀಸ್)