ಮದ್ಯ ಸೇವಿಸಲು ಹಣ ಕೊಡದ ತಾಯಿಯನ್ನು ಹತ್ಯೆಗೈದ ಮಗ

home
ಸಾಂದರ್ಭಿಕ ಚಿತ್ರ
Published on

ತೆಲಂಗಾಣ: ಕೆಲವರು ಹಣಕ್ಕಾಗಿ ಹಪಹಪಿಸುತ್ತಾರೆ. ಹಣಕ್ಕಾಗಿ ಯಾರ ಪ್ರಾಣವನ್ನೂ ತೆಗೆಯಲು ಹಿಂಜರಿಯುವುದಿಲ್ಲ.. ಒಂದು ಕ್ಷಣವೂ ಯೋಚಿಸುವುದಿಲ್ಲ. ಹೀಗೆ ಇಲ್ಲೊಬ್ಬ ಯುವಕ ತಾನು ಕೇಳಿದ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಮೇದಕ್ ಜಿಲ್ಲೆಯ ಹವೇಲಿ ಘನಾಪುರ ಮಂಡಲದ ತೊಗುಟ ಗ್ರಾಮದಲ್ಲಿ ನಡೆದಿದೆ.

ತೊಗುಟ ಗ್ರಾಮದ ಪುಸ್ತೆ ನರಸಮ್ಮ (40) ಮೃತ ಮಹಿಳೆ. ಭಾನು ಪ್ರಸಾದ್ ಕೊಲೆ ಮಾಡಿದ ಪಾಪಿ ಮಗ. ಮದ್ಯಪಾನಕ್ಕಾಗಿ ಅವನ ಸ್ವಂತ ತಾಯಿಯನ್ನೇ ಕೊಂದು ಜೈಲು ಪಾಲಾಗಿದ್ದಾನೆ.

Money

ನರಸಮ್ಮ ಎಂದಿನಂತೆ ನಿನ್ನೇ ಕೂಡಾ ಕೂಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದಿದ್ದಾಳೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಗ ಭಾನು ಪ್ರಸಾದ್ ತನ್ನ ತಾಯಿಗೆ ಕುಡಿಯಲು ಹಣ ಬೇಕು ಎಂದು ಕೇಳಿದ್ದಾನೆ. ಆದರೆ ತಾಯಿ ನರಸಮ್ಮ ಹಣವಿಲ್ಲವೆಂದು ಹೇಳಿದ್ದಾಳೆ. ಹಣ ನೀಡುತ್ತಿಲ್ಲ ಎಂದು ತಾಯಿಯೊಂದಿಗೆ ಜಗಳವಾಡಿದ್ದಾನೆ. ಈ ವೇಳೆ ಸಿಟ್ಟಿನಲ್ಲಿ ತಾಯಿಯನ್ನು ಕೊಲೆ ಮಾಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ನರಸಮ್ಮ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಭಾನು ಪ್ರಸಾದ್ ನನ್ನು ಬಂಧಿಸಿದ್ದಾರೆ. ಘಾಣಪುರ ಪೊಲೀಸರು ನರಸಮ್ಮ ಅವರ ಮೃತದೇಹವನ್ನು ಮೇದಕ್ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

insurance money

ಭಾನು ಪ್ರಸಾದ್ ಮನೆಯಲ್ಲಿ ಜಗಳ ಮಾಡಿ ತಾಯಿಗೆ ತೊಂದರೆ ಕೊಡುತ್ತಿದ್ದ. ಇತ್ತೀಚೆಗಷ್ಟೇ ಕುಡಿತದ ಚಟಕ್ಕೆ ಬಿದ್ದಿದ್ದು, ಕೊಲೆ ಮಾಡಿದ ಈ ಪಾಪಿಗೆ ಶಿಕ್ಷೆಯಾಗುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net