More

    ಕಚೇರಿಗೆ ಟೀ ಬರಲಿಲ್ಲ.. ಬೀದಿಬದಿ ಚಹಾ ಮಾರ್ತಿದ್ದ ವ್ಯಾಪಾರಿಗೆ ನೋಟಿಸ್​ ಕೊಟ್ಟ ಅಧಿಕಾರಿಗಳು

    ರಾಜಸ್ಥಾನ: ರಾಜಸ್ಥಾನದ ಝಲಾವರ್ ಜಿಲ್ಲೆಯ ಅಕ್ಲೇರಾದಲ್ಲಿ ಟೀ ಮಾರಾಟಗಾರನಿಗೆ ಪಂಚಾಯತ್ ಸಮಿತಿ ಶೋಕಾಸ್‌ ನೋಟಿಸ್​ ಕಳುಹಿಸಿದೆ. ಝಲಾವರ್ ಜಿಲ್ಲೆಯ ಮಾಜ್ರಾದ ಮನೋಹರರ್‌ ಥಾಣಾ ಪಂಚಾಯತ್‌ ಸಮಿತಿಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಇದು ವೈರಲ್‌ ಆದ ಬಳಿಕ, ಪತ್ರ ನಕಲಿ ಎಂದು ಪಂಚಾಯತ್‌ ಸಮಜಾಯಿಷಿ ನೀಡುವ ಮೂಲಕವಾಗಿ ಸುದ್ದಿಯಲ್ಲಿದೆ.

    ಬ್ಲಾಕ್‌ ಕೋ ಆರ್ಡಿನೇಟರ್‌ ಅಧಿಕಾರಿ ಮೋಹನ್‌ ಲಾಲ್‌ ಎನ್ನುವವರು, ಚಾಯ್‌ವಾಲಾ ಬಿರಮ್‌ಚಂದ್‌ ಎನ್ನುವ ವ್ಯಕ್ತಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ.

    ಇದನ್ನೂ ಓದಿ: ಸಹೋದರನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ನಟಿ

    ನೋಟಿಸ್​ನಲ್ಲಿ ಏನಿದೆ?: ಬಿರಮ್‌ ಚಂದ್‌ ಪಂಚಾಯತ್‌ ಆಫೀಸ್‌ನ ಸಮೀಪವೇ ಚಹಾ ಅಂಗಡಿ ಇರಿಸಿಕೊಂಡಿದ್ದಾರೆ. ಇಷ್ಟು ಸಮೀಪದಲ್ಲಿ ಟೀ ಅಂಗಡಿ ಇರಿಸಿಕೊಂಡಿದ್ದೂ ಪಂಚಾಯತ್‌ಗೆ ಸರಿಯಾದ ಸಮಯದಲ್ಲಿ ಚಹಾ ತಲುಪುತ್ತಿಲ್ಲ. ಇತ್ತೀಚೆಗಷ್ಟೇ ನಿಮಗೆ ಪಂಚಾಯತ್‌ ಆಫೀಸ್‌ಗೆ ಚಹಾ ತರುವಂತೆ ಹೇಳಲಾಗಿತ್ತು. ಆದರೆ, ನೀವು ಸರಿಯಾದ ಸಮಯಕ್ಕೆ ಚಹಾ ತಂದುಕೊಟ್ಟಿರುವುದಿಲ್ಲ. ಇನ್ಮುಂದೆ ಪಂಚಾಯತ್‌ ಆಫೀಸ್‌ನಿಂದ ಚಹಾ ತರುವಂತೆ ಸೂಚನೆ ನೀಡಿದಾಗ, ಎಮ್ಮೆಯ ಹಾಲನ್ನು ಕರೆದು ಫ್ರೆಶ್‌ ಆಗಿ ಚಹಾ ಮಾಡಿ ಪಂಚಾಯತ್‌ ಆಫೀಸ್‌ಗೆ ನೀಡಬೇಕು. ಸರಿಯಾದ ಸಮಯದಲ್ಲಿ ಚಹಾ ನೀಡದೇ ಇರುವುದು ಪಂಚಾಯತ್‌ ಬಗ್ಗೆ ಇರುವ ನಿಮ್ಮ ನಿರ್ಲಕ್ಷ್ಯವನ್ನು ತೋರುತ್ತದೆ. ಇದನ್ನು ಪಂಚಾಯತ್‌ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳೋದಿಲ್ಲ . ಇನ್ಮುಂದೆ ವಿಫಲವಾದಲ್ಲಿ ನಿಮ್ಮ ಅಂಗಡಿಯ ಪಾತ್ರೆಗಳು, ಚಹಾ ಮಾಡುವ ಸ್ಟೌಗಳನ್ನು ಪಂಚಾಯತ್‌ ವಶಪಡಿಸಿಕೊಳ್ಳಲಿದೆ ಎಂದು ನೋಟಿಸ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

    ಇದನ್ನೂ ಓದಿ: ಏರ್ ಇಂಡಿಯಾ ವಿಮಾನದಲ್ಲಿ ಈರುಳ್ಳಿ ವಾಸನೆ: ತುರ್ತು ಭೂಸ್ಪರ್ಶ ಮಾಡಿದ ಪ್ಲೈಟ್

    ಈ ನೋಟಿಸ್ ಸಂಪೂರ್ಣ ನಕಲಿಯಾಗಿದ್ದು, ಮೋಜಿಗಾಗಿ ಕಂಪ್ಯೂಟರ್ ಆಪರೇಟರ್ ಪ್ರಿಂಟ್ ಔಟ್ ಮಾಡಿದ್ದಾರೆ ಕಚೇರಿಯ ಭೋಜನ ವಿರಾಮದ ವೇಳೆ ತಮಾಷೆಗಾಗಿ ನಮ್ಮ ಕಂಪ್ಯೂಟರ್‌ ಆಪರೇಟರ್‌ ಈ ನೋಟಿಸ್‌ಅನ್ನು ಟೈಪ್‌ ಮಾಡಿ, ಅದನ್ನು ಚಾಯ್‌ವಾಲಾನಿಗೆ ನೀಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

    ದೇವಸ್ಥಾನದ ಕಾಣಿಕೆ ಹುಂಡಿಗೆ 2 ಸಾವಿರ ರೂ. ಮುಖಬೆಲೆಯ ಜೆರಾಕ್ಸ್ ನೋಟು ಹಾಕಿದ ಭಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts