ಮಲಗಿದ್ದ ತಂದೆಯ ತಲೆ‌ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದ ಮಗ

vijayapura crime
Published on

ವಿಜಯಪುರ: ಬುದ್ಧಿ ಹೇಳಿದ ಕಾರಣಕ್ಕೆ ತಂದೆ ಮೇಲೆ ಕೋಪಗೊಂಡ ಮಗ, ಮಲಗಿದ್ದ ವೇಳೆ ತಂದೆಯ ತಲೆ‌ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿರುವ ಘಟನೆ ವಿಜಯಪುರದ ವೆಂಕಟೇಶ್ವರ ನಗರದಲ್ಲಿ ನಡೆದಿದೆ.

ರಮೇಶ್​​ ಕೂಡಿಗನೂರ (60) ಹತ್ಯೆಯಾಗಿರುವ ದುರ್ದೈವಿ. ಪುತ್ರ ಅಮೀತ್ ಕೂಡಿಗನೂರ ಹತ್ಯೆಗೈದಿರುವ ಆರೋಪಿ. ತಂದೆಯನ್ನ ಕೊಂದ ಯುವಕ ಬಿಇ(ಇಂಜಿನಿಯರಿಂಗ್) ಪದವಿಧರ ಆಗಿದ್ದಾನೆ.

ಮಾದಕ ವ್ಯಸನಿಯಾಗಿದ್ದ ಅಮೀತ್​ಗೆ ದುಷ್ಚಟದಿಂದ ದೂರವಿರು ಎಂದು ರಮೇಶ್​​ ಬುದ್ದಿ ಹೇಳಿದ್ದರು. ಈ ವಿಚಾರವಾಗಿ ತಂದೆ-ಮಗನ ಮಧ್ಯೆ ಜಗಳವಾಗಿದೆ. ಕೋಪಗೊಂಡ ಮಗ ತಂದೆಯನ್ನೇ ಕೊಲೆ ಮಾಡಬೇಕು ಎಂದು ಸ್ಕೇಚ್​​ ಹಾಕಿದ್ದಾನೆ.

ಮನೆಯಲ್ಲಿ ರಮೇಶ್​​ ಮಲಗಿದ್ದ ವೇಳೆ ತಲೆ‌ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದು ಅಮೀತ್ ಎಸ್ಕೇಪ್ ಆಗಿದ್ದಾನೆ. ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net