

ಶಿವಮೊಗ್ಗ: ಗಡಿ ಕಾಯುವ ಸೈನಿಕರು ದೇಶದ ಹೃದಯವಿದ್ದಂತೆ. ಅವರನ್ನು ಗೌರವಿಸುವುದೇ ರೋಮಾಂಚಕ ಕ್ಷಣ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಜನ್ಮದಿನದ ಅಂಗವಾಗಿ ಯೋಧರು, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಾಮಾಜಿಕ ಕಾರ್ಯಗಳ ಮೂಲಕ ಜನ್ಮದಿನ ಆಚರಣೆ ಸಾರ್ಥಕವಾಗಿದೆ. ಯೋಧರಿಗೆ ನಮಿಸುವ, ಗೌರವಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಒಂದು ಸುಯೋಗ ಎಂದರು.
ವಿದ್ವಾನ್ ದತ್ತಮೂರ್ತಿ ಭಟ್ ಅಭಿನಂದನಾ ಭಾಷಣ ಮಾಡಿದರು. ಯೋಧರಾದ ಕರ್ನಲ್ ಮಾಣಿಕ್ ಪಥಾನಿಯ, ಲೆ. ಕರ್ನಲ್ ಆರ್. ವಿಷ್ಣುಶಂಕರ್, ಸುಬೇದಾರ್‌ಗಳಾದ ಮೇಜರ್ ಮೊಹಮದ್ ಇಕ್ಬಾಲ್, ಸುದರ್ಶನ್ ಸಿಂಗ್, ಪರಮ್‌ಜೀತ್ ಸಿಂಗ್, ಅಫ್ಜಲ್ ಖಾನ್, ಜಗ್‌ಜಿತ್ ರಾಜ್, ಹವಾಲ್ದಾರ್‌ಗಳಾದ ಸ್ಕಾಲ್‌ಝಂಗ್ ರಂಗಧೋಳ್, ಟಿಕಾರಾಮ್ ರಾಯ್, ಕೆ.ಕಾಶಿನಾಥ್, ಕೆ.ಚಿರಂಜೀವಿ, ಸುದೀಪ್ ಜಾಧವ್, ತೇಜೇಶ್ ಸಸಿ, ಸತ್ನಾಮ್ ಸಿಂಗ್, ಆನಂದ್ ಬಡಾಕುಂದ್ರಿ, ಕಾಳಗೌಡ ಹಾಲಪ್ಪ ಘಂಟಿ, ಈರಪ್ಪ ನಿರ್ವಾಣಿ ಪಾಟೀಲ್, ಮಕರಂದ್ ಉತ್ತಮ್ ಕೇಸರ್‌ಕರ್, ಎಸ್.ಕೆ.ರಮೇಶ್, ಮಹೇಂದ್ರ ಸಿಂಗ್ ನೇಗಿ ಅವರನ್ನು ಸನ್ಮಾನಿಸಲಾಯಿತು.