ಬೆಂಗಳೂರು: ಲಂಚ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಲೋಕಾಯುಕ್ತ ವೈ ಭಾಸ್ಕರ್ ರಾವ್ ಮತ್ತು ಅವರ ಪುತ್ರ ಹಾಗೂ ಇತರರ ವಿರುದ್ಧ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ದೋಷಾರೋಪ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ರದ್ದು ಪಡಿಸಿದೆ. ಇದನ್ನು ಪ್ರಶ್ನಿಸಿ ಎಸ್‌ಐಟಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಈ ಪ್ರಕರಣದಲ್ಲಿ ಮಧ್ಯವರ್ತಿ ಎನ್.ನರಸಿಂಹಮೂರ್ತಿ ಪಾತ್ರದ ಬಗ್ಗೆಯೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿತ್ತು. ಈ ದೋಷಾರೋಪಣಾ ಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
ಆಂತರಿಕ ಭ್ರಷ್ಟಾಚಾರ ದಂಧೆಯನ್ನು ೨೦೧೫ ರಲ್ಲಿ ಭೇದಿಸಲಾಯಿತು. ಆಗಿನ ಕಾಂಗ್ರೆಸ್ ಸರ್ಕಾರ ಎಸ್‌ಐಟಿ ರಚಿಸಿ ತನಿಖೆಯ ಜವಬ್ಧಾರಿಯನ್ನು ಅದಕ್ಕೆ ವಹಿಸಿತ್ತು. ತನಿಖೆಯ ಸಂದರ್ಭದಲ್ಲಿ, ಎಸ್‌ಐಟಿ ಐದು ಪ್ರಕರಣಗಳನ್ನು ದಾಖಲಿಸಿತ್ತು.
ಐದು ಪ್ರಕರಣಗಳ ಪೈಕಿ ಪ್ರಮುಖ ಆರೋಪಿ ನರಸಿಂಹಮೂರ್ತಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ಯಲ್ಲಿ (ಕೆಎಸ್‌ಆರ್‌ಪಿ) ಸಹಾಯಕ ಆಡಳಿತ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ಈತ ರಾಜ್ಯ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ಇಂಜಿನಿಯರ್ ಉದಯಶಂಕರ್ ಅವರನ್ನು ಸಂಪರ್ಕಿಸಿದ್ದ. ನಿಮ್ಮ ಸ್ವತ್ತುಗಳ ಲೋಕಾಯುಕ್ತ ಅಧಿಕಾರಿಗಳು ಮಾಹಿತಿಯನ್ನು ಸಂಗ್ರಹಿಸಿದ್ದು ಶೀಘ್ರವೇ ನಿಮ್ಮ ಮೇಲೆ ದಾಳಿ ನಡೆಸಲಿದ್ದಾರೆ ಎಂದು ತಿಳಿಸಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಲೋಕಾಯುಕ್ತ ಪೊಲೀಸರು ಮಾಹಿತಿಯನ್ನು ಸಂಗ್ರಹಿಸಿದ್ದರು.
ಉದಯಶಂಕರ್ ಅವರನ್ನು ಅಂದಿನ ಲೋಕಾಯುಕ್ತ ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅಲಿಯಾಸ್ ಅಶ್ವಿನ್ ಯರಬಾಟಿ ಅವರನ್ನು ಭೇಟಿ ಮಾಡಿಸಿ ದಾಳಿ ತಪ್ಪಿಸಲು ೩ ಕೋಟಿ ರೂ. ಗೆ
ನರಸಿಂಹಮೂರ್ತಿ ಬೇಡಿಕೆ ಇಟ್ಟಿದ್ದ. ಉದಯಶಂಕರ್ ಅವರನ್ನು ಲೋಕಾಯುಕ್ತರ ಅಧಿಕೃತ ನಿವಾಸಕ್ಕೆ ಕರೆದೊಯ್ದು ಅಶ್ವಿನ್ ಅವರನ್ನು ಭೇಟಿ ಮಾಡಿಸಿದ್ದ. ಈ ಎಲ್ಲ ಅಂಶವನ್ನು ಆರೋಪಪಟ್ಟಿಯಲ್ಲಿ ವಿವರಿಸಲಾಗಿತ್ತು. ೩ ಕೋಟಿ ರೂ. ಪಾವತಿಸಲು ಸಾಧ್ಯವಿಲ್ಲ ಎಂದು ತನ್ನ ಅಸಾಹಯಕತೆಯನ್ನು ವ್ಯಕ್ತಪಡಿಸಿದ ಉದಯಶಂಕರ್, ಕೊನೆಗೆ ೫ ಲಕ್ಷ ರೂ. ಅನ್ನು ನೀಡಲು ಒಪ್ಪಿಸಿದರು. ನರಸಿಂಹಮೂರ್ತಿ ಅವರನ್ನು ಕೆ.ಆರ್.ವೃತ್ತದ ಬಳಿ ಉದಯಶಂಕರ್ ಭೇಟಿ ಮಾಡಿ ಹಣ ನೀಡಿದರು. ನಂತರ, ದಾಳಿ ನಡೆಯುವ ಸಂಭವನೀಯರ ಪಟ್ಟಿಯಿಂದ ತಮ್ಮ ಹೆಸರನ್ನು ತೆಗೆಸಹಾಕಲಾಗಿದೆ ಎಂದು ನರಸಿಂಹಮೂರ್ತಿ ಉದಯಶಂಕರ್ ಅವರಿಗೆ ತಿಳಿಸಿದ್ದ.
ತಮ್ಮ ವಿರುದ್ಧ ಆರೋಪಪಟ್ಟಿ ದಾಖಲಾದ ನಂತರ ನರಸಿಂಹಮೂರ್ತಿ ಅವರು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳ ವಿಚಾರಣೆಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿ ಪ್ರಕರಣದಿಂದ ಬಿಡುಗಡೆಗೆ ಕೋರಿದರು. ಆ ವೇಳೆ ಆತ ಪೊಲೀಸ್ ಠಾಣೆಯಿಲ್ಲದ ಎಸ್‌ಐಟಿಗೆ ಚಾರ್ಜ್‌ಶೀಟ್ ಸಲ್ಲಿಸಲು ಯಾವುದೇ ಕಾನೂನಿನ ಅಧಿಕಾರವಿಲ್ಲ ಎಂದು ವಾದಿಸಿದ್ದ. ಆದರೆ ವಿಶೇಷ ನ್ಯಾಯಾಲಯವು ೨೦೨೧ ರಲ್ಲಿ ನರಸಿಂಹಮೂರ್ತಿಯ ಅರ್ಜಿಯನ್ನು ವಜಾಗೊಳಿಸಿತು. ಆದರೆ ಆತ ತಕ್ಷಣವೇ ಹೈಕೋರ್ಟ್ ಮೆಟ್ಟಿಲೇರಿದ. ಮತ್ತೆ ಅದೇ ಕಾರಣವನ್ನು ಪುನರುಚ್ಚರಿಸಿದ್ದ. ಹೀಗಾಗಿ ಈ ವರ್ಷ ಮೇ ೨೬ರಂದು ನರಸಿಂಹಮೂರ್ತಿ ವಿರುದ್ಧದ ಆರೋಪಪಟ್ಟಿಯನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಎಸ್‌ಐಟಿ ನ್ಯಾಯಾಕ್ಕಾಗಿ ಸುಪ್ರೀ ಕೋರ್ಟ್ ಮೆಟ್ಟಿಲೇರಿದೆ.