ಚಳಿಯ ತೀವ್ರತೆ ತಡೆಯಲಾರದೆ ವೃದ್ಧನ ಸಾವು!

8945213
Published on

ವಿಜಯಪುರ: ಚಳಿಯ ತೀವ್ರತೆಗೆ ವೃದ್ಧನೋರ್ವ ಸಾವನ್ನಪ್ಪಿದ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ಶನಿವಾರ(ಡಿ.10) ಬೆಳಗ್ಗೆ ನಡೆದಿದೆ. ಪಟ್ಟಣದ ಬಸವೇಶ್ವರ ವೃತ್ತದ ಬಳಿ ನೇತಾಜಿ ನಗರದ ನಿವಾಸಿ ಭೀಮಪ್ಪ ಹಾದಿಮನಿ(75) ಸಾವನ್ನಪ್ಪಿದ ವ್ಯಕ್ತಿ.

ಬಸವೇಶ್ವರ ವೃತ್ತದ ಬಳಿಯಿರುವ ಮದ್ಯದಂಗಡಿಗೆ ಬೆಳಗ್ಗೆ ಬಂದಿದ್ದ. ಸ್ವಲ್ಪ ಹೊತ್ತಿನ ಬಳಿಕ ವೃದ್ಧ ಕೈಯ್ಯಲ್ಲಿ ಒಂದಿಷ್ಟು ಹಣ ಹಿಡಿದುಕೊಂಡು ಪ್ರಣಾಮ ಮಾಡುವ ಸ್ಥಿತಿಯಲ್ಲಿ ಮಲಗಿದ್ದಾನೆ. ಸ್ಥಳದಲ್ಲಿದ್ದ ಮಂದಿಗೆ ಅನುಮಾನ ಬಂದು ವೃದ್ಧನನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ವೃದ್ಧ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ವೃದ್ಧನ ಕೈ ಮುಷ್ಟಿ ಮಾಡಿ ಗಟ್ಟಿಯಾದ ಸ್ಥಿತಿಯಲ್ಲಿರುವುದನ್ನು ಗಮನಿಸಿದಾಗ ಬೆಳಗಿನ ಚಳಿಯ ತೀವ್ರತೆ ತಾಳದೇ ಸಾವನ್ನಪ್ಪಿದ್ದಾನೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net