

ನವದೆಹಲಿ: ದೇಶೀಯವಾಗಿ ಅಭಿವೃದ್ಧಿ ಪಡಿಸಿದ ಮತ್ತು ನಿರ್ಮಿಸಿದ ಹಲವು ಶಸ್ತ್ರಗಳ ಪರೀಕ್ಷೆಗೆ ಭಾರತ ಸಿದ್ಧತೆ ನಡೆಸಿದೆ. ಇದರಲ್ಲಿ ಏರ್ ಟು ಏರ್ ಮಿಸೈಲ್, ವಿಕಿರಣ ನಿರೋಧಕ ಪಣಿಯಿಂದ ಹಿಡಿದು ಸ್ಮಾರ್ಟ್ ಆ್ಯಂಟಿ ಏರ್ಫೀಲ್ಡ್ ಶಸ್ತ್ರಗಳು ಮತ್ತು ದೀರ್ ದೂರದ ಗ್ಲೈಡ್ ಬಾಂಬ್ಗಳು ಒಳಗೊಂಡಿವೆ.
ಅಸ್ತ್ರ-1 (100 ಕಿ.ಮೀ. ರೇಂಜ್) ಮತ್ತು ಅಸ್ತ್ರ-2 (160 ಕಿ.ಮೀ. ರೇಂಜ್), ಬಿಯಾಂಡ್ ವಿಷುವಲ್ ರೇಂಜ್ ಏರ್ ಟು ಏರ್ ಮಿಸೈಲ್(ಬಿವಿಆರ್ಎಎಎಂ), 150 ಕಿ.ಮೀ. ಗುರಿ ತಲುಪಬಲ್ಲ ನ್ಯೂ ಜನರೇಷನ್ ಆ್ಯಂಟಿರೇಡಿಯೇಷನ್ ಮಿಸೈಲ್ (ಎನ್ಜಿಎಆರ್ಎಂ) ರುದ್ರಂ&1 ಗಳ ಪರೀೆ ಇದೇ ತಿಂಗಳು ನಡೆಯಲಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಮೊದಲ ಲೈವ್ ಲಾಂಚ್: ಅಸ್ತ್ರ-2 ಪಣಿಯ ಮೊದಲ ಲೈವ್ ಲಾಂಚ್ ಸುಖೋಯ್ -30 ಎಂಕೆಐ ಫೈಟರ್ ಜೆಟ್ನಿಂದ ನಡೆಯಲಿದೆ. ಇದಕ್ಕೂ ಮೊದಲು ಅದರ ಸಾಗಣೆ ಮತ್ತು ಪ್ರಯೋಗಗಳನ್ನು ಸುಮ್ಮನೆ ಬೀಳಿಸುವ ಮೂಲಕ ಮಾಡಲಾಗುತ್ತದೆ. ಇದೇ ತಿಂಗಳಲ್ಲಿ ಈ ಪಣಿಯ ಮೊದಲ ಲೈವ್ ಲಾಂಚ್ ನಡೆಯುವ ಸಾಧ್ಯತೆ ಇದೆ.
ಉತ್ಪಾದನೆಯಲ್ಲಿ ಪ್ರಗತಿ
ಅಸ್ತ್ರ -1ರ ಉತ್ಪಾದನೆ ಈಗಾಗಲೇ ಭಾರತ್ ಡೈನಾಮಿಕ್ಸ್ನಲ್ಲಿ ಶುರುವಾಗಿದೆ. ಈ ಪಣಿಯ ಪರೀೆಗಳೆಲ್ಲವೂ ಮುಕ್ತಾಯವಾಗಿದ್ದು, ರಷ್ಯಾದ ಎಜಿಎಟಿ ಜೆಟ್ನಿಂದಲೇ ಮಾಡಲಾಗಿದೆ. 250 ಅಸ್ತ್ರ -1 ಪಣಿಯ ಉತ್ಪಾದನೆಗೆ ಆರಂಭಿಕ ಆರ್ಡರ್ ಅನ್ನು ಸೇನೆ ಭಾರತ್ ಡೈನಾಮಿಕ್ಸ್ಗೆ ಕೊಟ್ಟಿದೆ. ಈ ಪಣಿಯನ್ನು ತೇಜಸ್, ಮಿಗ್& 29ಕ್ಕೆ ಅಳವಡಿಸುವ ಕೆಲಸವೂ ಪ್ರಗತಿಯಲ್ಲಿದೆ.
ಗ್ಲೈಡ್ ಬಾಂಬ್ ಎಂದರೆ..
ಗ್ಲೈಡ್ ಬಾಂಬ್ ಎಂಬುದು ಸ್ಮಾರ್ಟ್ ಆ್ಯಂಟಿ ಏರ್ಫೀಲ್ಡ್ ವೆಪನ್ಸ್ನ ಭಾಗವಾಗಿದೆ. ಇವುಗಳನ್ನು ಶತ್ರುಗಳ ರನ್ವೇ, ಬಂಕರ್, ಏರ್ಕ್ರಾಫ್ಟ್ ಹ್ಯಾಂಗರ್ಸ್, ರೇಡಾರ್ ಮತ್ತು ಇತರೆ ರಕ್ಷಣಾ ಸ್ಥಾವರಗಳನ್ನು ನಾಶ ಮಾಡಲು ಬಳಸಲಾಗುತ್ತದೆ. 100 ಕಿ.ಮೀ. ಗುರಿಯನ್ನು ನಿರ್ದೇಶಿತ ವ್ಯವಸ್ಥೆಯಲ್ಲಿ ಈ ಬಾಂಬ್ ತಲುಪಿ ನಾಶಪಡಿಸುತ್ತದೆ. ಇವು ಸಾಮಾನ್ಯವಾಗಿ 125 ಕಿಲೋ ತೂಕ ಹೊಂದಿದ್ದು, ಉಪಗ್ರಹ ನ್ಯಾವಿಗೇಷನ್ ಅಥವಾ ಎಲೆಕ್ಟ್ರೊ-ಆಪ್ಟಿಕಲ್ ಇಮೇಜಿಂಗ್ ಇನ್್ರಾ ರೆಡ್ ಸೀಕರ್ ಎಂಬ ಎರಡು ಕಾನ್ಫಿಗರೇಷನ್ ಆಧಾರಿತವಾಗಿದೆ. ಸುಖೋಯ್ ಅಥವಾ ಜಾಗ್ವಾರ್ಗಳಲ್ಲಿ ಇದನ್ನು ಅಳವಡಿಸಲಾಗುತ್ತದೆ. ಸುಖೋಯ್ನಲ್ಲಿ ಇಂತಹ 32 ಬಾಂಬ್ ಸಾಗಿಸಬಹುದು. ಇದಲ್ಲದೆ, 80 ಕಿ.ಮೀ. ರೇಂಜ್ನ 1000 ಕಿಲೋ ತೂಕದ ಭಾರಿ ಕ್ಯಾಲಿಬ್ರೆ ಗ್ಲೈಡ್ ಬಾಂಬ್ ಅನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಯೋಗಕ್ಕೆ ಸಿದ್ಧತೆ
ಈ ವರ್ಷದ ಕೊನೆಯೊಳಗೆ 350 ಕಿ.ಮೀ. ರೇಂಜ್ ಇರುವ ಅಸ್ತ್ರ -3ರ ಮೊದಲ ಟೆಸ್ಟ್ ನಡೆಯಲಿದೆ. ಈ ಪಣಿಯು ಸಾಲಿಡ್ ಫ್ಯುಯೆಲ್ ಆಧಾರಿತ ಡಕ್ಟೆಡ್ ರಾಮ್ಜೆಟ್ ಪ್ರೊಪಲ್ಶನ್ ಮೂಲಕ ಚಾಲಿತವಾದುದು. ಇದು ಪಣಿ ದೀರ್ ದೂರ ತಲುಪುವುದಕ್ಕೆ ನೆರವಾಗುತ್ತದೆ ಎಂದು ಮೂಲಗಳು ತಿಳಿಸಿವೆ.