ಸಮಾಜದ ಅಭಿವೃದ್ಧಿಗೆ ಸ್ವಸಹಾಯ ಸಂಘಗಳ ಪಾತ್ರ ಅಪಾರ

23BTP01
ಹೊನ್ನಾಪುರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಣಗಾಲ್ ವಲಯದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರವನ್ನು ಗಣ್ಯರು ಉದ್ಘಾಟಿಸಿದರು. ಲೀಲಾವತಿ, ಸಂತೋಷ್, ಚೇತನ್, ರಮೇಶ್, ರಜನಿ,ಸುರೇಶ್ ಇದ್ದರು.
Published on

ಬೆಟ್ಟದಪುರ: ಸಮಾಜ ಹಾಗೂ ಮಹಿಳೆಯರ ಅಭಿವೃದ್ಧಿಗೆ ಸ್ವಸಹಾಯ ಸಂಘಗಳ ಪಾತ್ರ ಮಹತ್ವವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.

ಬೆಟ್ಟದಪುರ ಸಮೀಪದ ಹೊನ್ನಾಪುರ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣಗಾಲ್ ವಲಯದ ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಯೋಜನೆ ವತಿಯಿಂದ ಕಡಿಮೆ ಬಡ್ಡಿ ಸಾಲ ನೀಡಲಾಗುತ್ತಿದೆ. ಅಲ್ಲದೆ ಹಲವಾರು ಯೋಜನೆಗಳನ್ನು ಹಾಗೂ ತರಬೇತಿ ನೀಡುವ ಮೂಲಕ ಸಮಾಜದ ಹಿತ ಕಾಯುತ್ತಿದೆ ಎಂದರು.

ವಲಯ ಯೋಜನಾಧಿಕಾರಿ ಸಂತೋಷ್, ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಚೇತನ್, ಸಿರಿ ಮಿಲ್ಲೆಟ್ ಯೋಜನಾಧಿಕಾರಿ ರಮೇಶ್, ಮೇಲ್ವಿಚಾರಕಿ ರಜನಿ, ವಲಯ ಮೇಲ್ವಿಚಾರಕ ಸುರೇಶ್, ಸೇವಾ ಪ್ರತಿನಿಧಿಗಳಾದ ಸಣ್ಣೇಗೌಡ, ಪುಷ್ಪಲತಾ, ಲಕ್ಷ್ಮೀ, ಸಮಿನಾ, ಸೌಮ್ಯಾ ವಿದ್ಯಾರಾಣಿ ಇದ್ದರು.

ಹೊನ್ನಾಪುರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಣಗಾಲ್ ವಲಯದ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಗಾರವನ್ನು ಗಣ್ಯರು ಉದ್ಘಾಟಿಸಿದರು. ಲೀಲಾವತಿ, ಸಂತೋಷ್, ಚೇತನ್, ರಮೇಶ್, ರಜನಿ,ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net