ಅಪರಾಧ ಪ್ರಕರಣದಲ್ಲಿ ವಿಧಿ,ವಿಜ್ಞಾನ ಪಾತ್ರ ಮಹತ್ವದ್ದು

medical collage
ಕೋಲಾರದ ದೇವರಾಜ ಅರಸು ವೈದ್ಯಕಿಯ ಮಹಾ ವಿದ್ಯಾಲಯದ ವಿಧಿ ವೈದ್ಯ ಮತ್ತು ವಿಷ ವಿಾನ ಶಾಸ ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಉಪಾಧ್ಯ ಜೆ.ರಾಜೇಂದ್ರ ಉದ್ಘಾಟಿಸಿದರು. ಡಾ.ವೇಗಮ್ಮ, ಡಾ.ಅರವಿಂದ್​, ಡಾ.ಅಜಯ್​ ಕುಮಾರ್​, ಡಾ.ಕೃಷ್ಣಪ್ಪ ಇದ್ದರು.
Published on

ಕೋಲಾರ: ಕೊಲೆ, ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ವಿಧಿ ವೈದ್ಯ, ವಿಷ ವಿಜ್ಞಾನ ಶಾಸ್ತ್ರವು ಮಹತ್ವದ ಪಾತ್ರವಹಿಸುತ್ತದೆ ಎಂದು ದೇವರಾಜ ಅರಸು ಶಿಣ ಸಂಸ್ಥೆಯ ಉಪಾಧ್ಯ ಜೆ.ರಾಜೇಂದ್ರ ಹೇಳಿದರು.

ನಗರದ ದೇವರಾಜ ಅರಸು ವೈದ್ಯಕಿಯ ಮಹಾ ವಿದ್ಯಾಲಯದ ವಿಧಿ ವೈದ್ಯ ಮತ್ತು ವಿಷ ವಿಜ್ಞಾನ ಶಾಸ್ತ್ರ ವಿಭಾಗದಿಂದ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವೈದ್ಯಕಿಯ ವಿದ್ಯಾರ್ಥಿಗಳು ಆವಿಷ್ಕಾರಗಳನ್ನು ಮಾಡುವ ಸ್ಮೂಕ್ಷ್ಮ ಕಾಯಿಲೆಗಳನ್ನು ನಿವಾರಣೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಸಮ್ಮೇಳನಕ್ಕೆ ಕೋಲಾರ ಆತಿಥ್ಯ ವಹಿಸಿರುವುದು. ನಮ್ಮ ಸೌಭಾಗ್ಯವಾಗಿದ್ದು ಈ ನಿಟ್ಟಿನಲ್ಲಿ ಹೆಚ್ಚಿನ ಪ್ರತಿಭೆಗಳು ಅನಾವರಣಗೊಳ್ಳಲು ಸಂಸ್ಥೆಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ವೈದ್ಯಕಿಯ ಮಹಾವಿದ್ಯಾಲಯದ ಉಪಕುಲಪತಿ ಡಾ.ವೆಂಗಮ್ಮ ಮಾತನಾಡಿ, ವಿಧಿ ವಿಾನ ಸವಾಲಿನ ವಿಷಯವಾಗಿದ್ದು, ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಮಾಹಿತಿ ಒದಗಿಸಲು ವೈದ್ಯಕಿಯ ಸಂಶೋಧಕರು ಮುಂದಾಗಬೇಕು ಎಂದು ಹೇಳಿದರು.
ವಿಷ ಶಾಸ್ತ್ರದ ಅಧ್ಯಯನದ ಖರ್ಚುವೆಚ್ಚಗಳು ಜನ ಸಾಮಾನ್ಯರ ಕೈಗೆಟುಕುವಂತಾಗುವಂತಾದರೆ ಹೆಚ್ಚಿನ ವೈದ್ಯರು ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಿ ವೈದ್ಯ ಶಾಸದ ಮುಖ್ಯಸ್ಥ ಡಾ.ಅಜಯ್ ​ಕುಮಾರ್​ ಮಾತನಾಡಿ, ವಿಧಿ ವೈದ್ಯ, ವಿಷ ವಿಜ್ಞಾನ ಶಾಸ್ತ್ರ, ಸೆಲ್ಯೂಲಾರ್​, ನ್ಯಾನೋ ತಂತ್ರಾನದ ಮಟ್ಟಕ್ಕೆ ತಲುಪಿದ್ದು, ಈ ದೆಸೆಯಲ್ಲಿ ಆರ್ಟಿಫಿಷಿಯಲ್​ ಎಂಜಿನಿಯರಿಂಗ್​ ಹೆಚ್ಚಿನ ಸಹಕಾರಿ ಆಗಿದೆ. ಆದ್ದರಿಂದ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕೆಂದು ಸಲಹೆ ನೀಡಿದರು.
ಸಮಾವೇಶದಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗೋವಾ, ಒರಿಸ್ಸಾ, ಪಂಜಾಬ್​, ಹಿಮಾಚಲ ಪ್ರದೇಶ ಸೇರಿ ದೇಶದ ನಾನಾ ಭಾಗಗಳಿಂದ 250 ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಮುಖವಾಗಿ ಹಾವು ಕಡಿತ, ವಿಷ ಗಿಡಗಳ ಬಗ್ಗೆ ಚರ್ಚೆ ನಡೆಯಿತು.
ಕಾಲೇಜಿನ ರಿಜಿಸ್ಟ್ರಾರ್​ ಡಾ.ಪ್ರಸಾದ್​, ಡೀನ್​ ಡಾ.ಪ್ರಭಾಕರ್​, ಅಧೀಕ ಡಾ.ಕೃಷ್ಣಪ್ಪ, ಡಾ.ದಿನೇಶ್​ ಕಾರ್ತಿಕ್​, ಡಾ.ಅರವಿಂದ್​, ಡಾ.ವೆಂಕಟರಾವ್​ ಹಾಜರಿದ್ದರು.

ಬಾಕ್ಸ್​…
ಅಪರಾಧೀಕರಣ ಸಂಶೋಧನೆ ಹೆಚ್ಚಾಗಲಿ
ದೇಶಾದ್ಯಂತ ಚರ್ಚೆ ಆಗುತ್ತಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಧಿ ವೈದ್ಯ, ವಿಷ ವಿಾನ ಶಾಸದ ಮಹತ್ವ ಹೆಚ್ಚಿನದಾಗಿದ್ದು, ಹೀಗಾಗಿ ವೈದ್ಯಕಿಯ ಅಧ್ಯಯನದಲ್ಲಿ ಅಪರಾಧೀಕರಣದ ಸಂಶೋಧನೆ ಹೆಚ್ಚಾಗಬೇಕು ಎಂದು ವೈದ್ಯಕಿಯ ಶಿಣ ನಿರ್ದೇಶಕಿ ಡಾ.ಬಿ.ಎಲ್​.ಸುಜಾತ ರಾಥೋಡ್​ ಹೇಳಿದರು. ಯಾವುದೇ ಅಪರಾಧ ನ್ಯಾಯಾಲಯದಲ್ಲಿ ಸಾಬೀತು ಆಗಬೇಕೆಂದರೆ ವಿಧಿ ವೈದ್ಯರ ಪಾತ್ರ ಹೆಚ್ಚಿನದಾಗಿರುವುದರಿಂದಾಗಿ ವೈದ್ಯರು ಎಚ್ಚರಿಕೆಯಿಂದ ವಿಷದ ಪ್ರಮಾಣ ಮಾಪನ ಮಾಡಬೇಕಾಗಿದ್ದು ಇಲ್ಲಿ ಎಡವಟ್ಟಾದರೆ ಇಡೀ ಪ್ರಕರಣ ಹಳ್ಳ ಹಿಡಿಯುತ್ತದೆ ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net