ಕಾಲಮಿತಿಯಲ್ಲಿ ರಸ್ತೆ ಕಾಮಗಾರಿ ಪೂರ್ಣ

road (1)
ಸಾಗರ ತಾಲೂಕಿನ ಕಲ್ಮನೆಯಲ್ಲಿ ರಸ್ತೆ ಕಾಮಗಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಶಂಕುಸ್ಥಾಪನೆ ನೆರವೇರಿಸಿದರು.
Published on

ಸಾಗರ: ಕಾಲಮಿತಿಯಲ್ಲಿ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಪೂರ್ಣಗೊಳಿಸಲಾಗುವುದು. ಮಳೆಗಾಲದ ಸಂದರ್ಭ ಜನರ ಒಡಾಟಕ್ಕೆ ತೊಂದರೆ ಆಗಬಾರದು ಎಂದು ಆವಿನಹಳ್ಳಿ, ಕಸಬಾ ಮತ್ತು ಕರೂರು ಭಾರಂಗಿ ಹೋಬಳಿ ರಸ್ತೆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ತಾಲೂಕಿನ ಕಲ್ಮನೆಯಲ್ಲಿ ಸೋಮವಾರ ಆಯೋಜಿಸಿದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಇಕ್ಕೇರಿ, ಕಲ್ಮನೆ, ಮತ್ತಿಕೊಪ್ಪ, ಗ್ಯಾಸ್ ಗೋದಾಮಿನಿಂದ ತಿಮ್ಮಣ್ಣ ನಾಯಕ ಕೆರೆವರೆಗೆ ಸಂಪರ್ಕ ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು.

ಶರಾವತಿ ಹಿನ್ನೀರಿನ ಕರೂರು, ಆವಿನಹಳ್ಳಿ ಮತ್ತು ಭಾರಂಗಿ ಹೋಬಳಿಯಲ್ಲಿ ಕಾಲುಸಂಕ ಮತ್ತು ಸೇತುವೆ ನಿರ್ಮಾಣಕ್ಕೆ ಬೇಡಿಕೆ ಇದೆ. 75 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ತ್ವರಿತಗತಿಯಲ್ಲಿ ಅನುಷ್ಠಾನವಾಗುತ್ತಿದೆ. ಕೆಲವೆಡೆ ಕಾಮಗಾರಿ ನಿಲ್ಲಿಸಿದರೆ, ಇನ್ನೂ ಕೆಲವೆಡೆ ಕಾಮಗಾರಿ ಆರಂಭಿಸಿಲ್ಲ. ಸಣ್ಣಪುಟ್ಟ ಗೊಂದಲ ಇರುವುದು ನನ್ನ ಗಮನದಲ್ಲಿದ್ದು, ಶೀಘ್ರ ಸರಿಪಡಿಸಲಾಗುವುದು ಎಂದು ಹೇಳಿದರು.

ಕಲಸೆ ಚಂದ್ರಪ್ಪ, ಕಬೀರ್ ಚಿಪ್ಳಿ, ಉಷಾ, ಮಧುಮಾಲತಿ, ಸೈಯದ್ ಜಾಕೀರ್, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net