

ತಮಿಳುನಾಡು: ಇತ್ತೀಚೆಗಷ್ಟೇ ತಮಿಳು ಚಿತ್ರರಂಗದ ಸ್ಟಾರ್ ನಟ, ದಳಪತಿ ವಿಜಯ್ ಜತೆಗೆ ಪ್ಯಾನ್ ಇಂಡಿಯಾ 'ಲಿಯೋ' ಸಿನಿಮಾದಲ್ಲಿ ನಟಿಸಿ, ಮಿಂಚಿದ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಇದೀಗ ಮತ್ತೊಂದು ಚಿತ್ರದ ಮುಖೇನ ಸಿನಿಪ್ರೇಕ್ಷಕರನ್ನು ಒಟಿಟಿಯಲ್ಲಿ ಮನರಂಜಿಸಲು ಸಜ್ಜಾಗಿದ್ದಾರೆ.
ಅರುಣ್ ವಸೀಗರನ್ ನಿರ್ದೇಶಿಸಿ, ಬರೆದ ಕ್ರೈಮ್-ಥ್ರಿಲ್ಲರ್ 'ದಿ ರೋಡ್'ನಲ್ಲಿ ನಾಯಕಿಯಾಗಿ ತ್ರಿಶಾ ಅಭಿನಯಿಸಿದ್ದರು. ಈ ಸಿನಿಮಾ ಕಳೆದ ತಿಂಗಳು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಇದೀಗ ಸಿನಿಮಾ ಡಿಜಿಟಲ್ನಲ್ಲಿ ರಿಲೀಸ್ಗೆ ಮುಂದಾಗಿದ್ದು, ತಮಿಳು ಮತ್ತು ತೆಲುಗು ಎರಡೂ ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ.
ಒಟಿಟಿ ಪ್ಲಾಟ್ಫಾರ್ಮ್ 'ಆಹಾ'ದಲ್ಲಿ 'ದಿ ರೋಡ್' ಸಿನಿಮಾ ಸ್ಟ್ರೀಮ್ ಆಗಲಿದ್ದು, ತಮಿಳು ಮತ್ತು ತೆಲುಗು ಎರಡೂ ಆವೃತ್ತಿಗಳಲ್ಲಿ ಲಭ್ಯವಿರಲಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದವರು ಈಗ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಬಹುದು,(ಏಜೆನ್ಸೀಸ್).