More

    ವಿಶ್ವಕಪ್​ನಲ್ಲಿ ಭಾರತದ ಯಶಸ್ಸಿನ ಹಿಂದಿರುವ ಅಸಲಿ ಸೀಕ್ರೆಟ್ ಬಿಚ್ಚಿಟ್ಟ ಮೊಹಮ್ಮದ್​ ಸಿರಾಜ್​! ​​

    ನವದೆಹಲಿ: ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಎದುರಾಳಿ ತಂಡವನ್ನು ಬೆಣ್ಣೆಯಲ್ಲಿ ಕೂದಲು ತೆಗೆದಷ್ಟೇ ಸುಲಭವಾಗಿ ಮಣಿಸಿ ಅಜೇಯ ಓಟವನ್ನು ಮುಂದುವರಿಸಿದೆ. ಇದುವರೆಗೂ 8 ಪಂದ್ಯಗಳನ್ನು ಆಡಿದ್ದು, ಯಾವೊಂದು ಪಂದ್ಯದಲ್ಲೂ ಭಾರತಕ್ಕೆ ಯಾರೂ ಸಹ ಪ್ರಬಲ ಪೈಪೋಟಿ ನೀಡಲೇ ಇಲ್ಲ. ಕ್ರಿಕೆಟ್​ ಜಗತ್ತಿನ ಸುಲ್ತಾನನಂತೆ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಭಾರತ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಈ ಬಾರಿ ವಿಶ್ವಕಪ್​ ಎತ್ತಿಹಿಡಿಯುವ ಎಲ್ಲರ ನೆಚ್ಚಿನ ತಂಡವಾಗಿದೆ.

    ಭಾರತದ ಈ ಅಮೋಘ ಪ್ರದರ್ಶನ ಅಥವಾ ಯಶಸ್ಸಿನ ಹಿಂದಿರುವ ರಹಸ್ಯ ಏನು ಎಂಬುದನ್ನು ಸ್ಟಾರ್​ ಬೌಲರ್​ ಮೊಹಮ್ಮದ್​ ಸಿರಾಜ್​ ಇದೀಗ ಬಹಿರಂಗಪಡಿಸಿದ್ದಾರೆ. ಸಿರಾಜ್​ ಪ್ರಕಾರ ಭಾರತ ತಂಡದ ಒಗ್ಗಟ್ಟು ತುಂಬಾ ವಿಶೇಷವಂತೆ ಮತ್ತು ಪ್ರತಿಯೊಬ್ಬರು ಕೂಡ ಕುಟುಂಬದ ಸದಸ್ಯರಂತೆ ಪರಸ್ಪರ ನೋಡಿಕೊಳ್ಳುವುದೇ ನಮ್ಮ ಯಶಸ್ಸಿನ ಹಿಂದಿರುವ ರಹಸ್ಯವೆಂದು ಹೇಳಿದ್ದಾರೆ.

    ಪ್ರಸ್ತುತ ವಿಶ್ವಕಪ್​ ಟೂರ್ನಿಯಲ್ಲಿ ತಂಡದ ನಿರ್ವಾಹಕರು, ಪ್ರತಿಯೊಬ್ಬ ಆಟಗಾರರಿಗಗೂ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ. ಈ ಕ್ಷಣದಲ್ಲಿ ನೀವು ತಂಡದ ವಾತಾವರಣವನ್ನು ನೋಡುವುದಾದರೆ, ಪ್ರತಿಯೊಬ್ಬರು ಕೂಡ ಪರಸ್ಪರ ಭೇಟಿಯಾಗುತ್ತಾರೆ ಮತ್ತು ಮಾತನಾಡುತ್ತಿದ್ದಾರೆ. ಡ್ರೆಸ್ಸಿಂಗ್​ ರೂಮ್​ ಒಳಗೆ ಒಂದು ಬಲವಾದ ಒಗ್ಗಟ್ಟು ಇದೆ. ಹೇಳಬೇಕೆಂದರೆ, ಭಾರತ ತಂಡ ಒಂದು ಕುಟುಂಬವಿದ್ದಂತೆ ಎಂದು ಸ್ಟಾರ್​ ಸ್ಪೋರ್ಟ್ಸ್​ ಮಾಧ್ಯಮ ಸಂದರ್ಶನದಲ್ಲಿ ಸಿರಾಜ್​ ಹೇಳಿದ್ದಾರೆ.

    ನಮ್ಮೆಲ್ಲರ ಗುರಿ ಒಂದೇ ಎಂಬುದು ಎಲ್ಲರಿಗೂ ತಿಳಿದಿದೆ. ನಾವು ಭಾರತಕ್ಕಾಗಿ ವಿಶ್ವಕಪ್​ ಟ್ರೋಫಿ ಗೆಲ್ಲಬೇಕು. ಟೀಮ್ ಮ್ಯಾನೇಜ್‌ಮೆಂಟ್ ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಪಡೆಯುತ್ತಿದೆ ಮತ್ತು ಪ್ರತಿಯೊಬ್ಬ ಆಟಗಾರನಿಗೂ ಸರಿಯಾದ ಪ್ರಾಮುಖ್ಯತೆಯನ್ನು ನೀಡುತ್ತಿದೆ. ನಾವು ಅದೇ ವಾತಾವರಣವನ್ನು ಉಳಿಸಿಕೊಂಡರೆ, ನಾವು ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಕನಸನ್ನು ಸುಲಭವಾಗಿ ನನಸಾಗಿಸಿಕೊಳ್ಳುತ್ತೇವೆ ಎಂಬುದು ನಮಗೆ ತಿಳಿದಿದೆ ಎಂದು ಸಿರಾಜ್​ ತಿಳಿಸಿದ್ದಾರೆ.

    ಸಿರಾಜ್​ ಹೇಳಿದ ಮಾತುಗಳನ್ನು ಅಕ್ಷರಶಃ ಸತ್ಯ ಎಂಬುದು ಕ್ರೀಡಾಂಗಣದಲ್ಲಿ ಟೀಮ್​ ಇಂಡಿಯಾದ ಪ್ರದರ್ಶನ ನೋಡಿದರೆ ಗೊತ್ತಾಗುತ್ತದೆ. ಒಂದೂ ಪಂದ್ಯವನ್ನು ಸೋಲದೆ ಸಮಿಫೈನಲ್​ ತಲುಪಿದ ಮೊದಲ ತಂಡ ಎನಿಸಿಕೊಂಡಿರುವ ಭಾರತ, ನ.12ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್​ ತಂಡದ ಜತೆಗೆ ಗ್ರೂಪ್ ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಒಂದೂ ಪಂದ್ಯವನ್ನು ಸೋಲದೆ ಭಾರತ ಟ್ರೋಫಿ ಎತ್ತಿಹಿಡಿಯುವ ನಿರೀಕ್ಷೆ ಇದೆ.

    ಭಾರತದ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ಅದ್ಭುತ ಫಾರ್ಮ್​ನಲ್ಲಿದೆ. ಸ್ವತಃ ಸಿರಾಜ್ ಅವರು ಈ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ಸಾಥ್​ ನೀಡುತ್ತಿದ್ದು, ಪ್ರಸ್ತುತ ಭಾರತೀಯ ಬೌಲಿಂಗ್ ದಾಳಿಯನ್ನು ಅನೇಕರು ವಿಶ್ವಕಪ್ ಇತಿಹಾಸದಲ್ಲಿ ಅತ್ಯುತ್ತಮ ಎಂದು ಕರೆಯುತ್ತಾರೆ.

    ಸೆಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು
    ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಪ್ರಸ್ತುತ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

    ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ
    ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    ಪಾಕ್​ ಮುಂದಿರೋದು ಅಂತಿಂಥ ಸವಾಲಲ್ಲ ತಿಪ್ಪರಲಾಗ ಹಾಕಿದ್ರೂ ಆಗಲ್ಲ! ಈ ನಾಲ್ವರ ನಡುವೆ ಸೆಮೀಸ್ ಕದನ ಫಿಕ್ಸ್

    ಲಂಕಾ ವಿರುದ್ಧ ಭರ್ಜರಿ ಗೆಲುವು: ಕಿವೀಸ್​ ಪಡೆಯ ಸಮೀಸ್​ ಸ್ಥಾನ ಬಹುತೇಕ ಖಚಿತ, ಪಾಕ್​ ಹಾದಿ ಮತ್ತಷ್ಟು ಕಠಿಣ

    ಪಾಕಿಸ್ತಾನ ಸೆಮೀಸ್​ ತಲುಪಲು ಸುಲಭ ಉಪಾಯ ಹೇಳಿಕೊಟ್ಟ ವಾಸಿಂ ಅಕ್ರಮ್​; ವ್ಯಾಪಕ ಟೀಕೆಗೆ ಗುರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts