ಸಮಾಜದಲ್ಲಿ ಗಳಿಸಿದ ಹೆಸರು ಸತ್ತ ನಂತರವೂ ಶಾಶ್ವತ

SRP_05-03jpj
ಶ್ರೀರಂಗಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ ಭಕ್ತರು ಹಲವು ರಾಜಕೀಯ ಗಣ್ಯರು, ಅಧಿಕಾರಿಗಳು ಹಾಗೂ ವಿವಿಧ ಮಠಾಧೀಶರ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 50ನೇ ಜನ್ಮದಿನದ ವರ್ಧಂತ್ಯುತ್ಸವ ಕಾರ್ಯಕ್ರಮವನ್ನು ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಉದ್ಘಾಟಿಸಿದರು. ಡಾ.ಎಚ್.ಸಿ.ಮಹದೇವಪ್ಪ, ಎ.ಬಿ.ರಮೇಶ ಬಂಡಿಸಿದ್ದೇಗೌಡ, ಸಿ.ಎಸ್.ಪುಟ್ಟರಾಜು, ಎಂ.ಶಿವಣ್ಣ, ಡಾ.ಕುಮಾರ, ಕೆ.ಆರ್.ನಂದಿನಿ, ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.
Published on

ಶ್ರೀರಂಗಪಟ್ಟಣ: ಮನಸ್ಸು ಪರಿಶುದ್ಧವಾಗಿದ್ದು ತಾಯಿಯಂತೆ ಮಮತೆ ಮತ್ತು ತ್ಯಾಗಕ್ಕೆ ಸಿದ್ಧವಿದ್ದು ಜವಾಬ್ದಾರಿ ಹೊತ್ತುಕೊಂಡಾಗ ವಯಸ್ಸು 50 ಆದರೂ ಅದು ದೇಹಕ್ಕೆ ಅದು ನಾಟುವುದಿಲ್ಲ ಎಂದು ಚಂದ್ರವನ ಮಠದ ಪೀಠಾಧಿಪತಿ ಡಾ.ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದಲ್ಲಿ ಭಕ್ತರು ಹಲವು ರಾಜಕೀಯ ಗಣ್ಯರು, ಅಧಿಕಾರಿಗಳು ಹಾಗೂ ವಿವಿಧ ಮಠಾಧೀಶರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 50ನೇ ಜನ್ಮದಿನದ ವರ್ಧಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹುಟ್ಟು ಉಚಿತ, ಸಾವು ನಿಶ್ಚಿತ. ಆದರೆ ಇವುಗಳ ನಡುವೆ ಬದುಕಿದ ನಡೆ, ನೀಡಿದ ಕೊಡುಗೆ, ಗಳಿಸಿದ ಹೆಸರು ನಾವು ಜಗವ ಅಗಲಿದ ಮೇಲೂ ಶಾಶ್ವತ. ಹೀಗಾಗಿ ನಾವು ಮಾಡುವ ಕಾರ್ಯಗಳು, ನುಡಿದ ಮಾತುಗಳು ಮಧುರವಿದ್ದಾಗ ನಾವು ಸದಾ ಕಾಲ ಜೀವಿಸುತ್ತೇವೆ. ನನಗೆ ಶುಭಾಶಯ ಕೋರಿದ ಎಲ್ಲರಿಂದ ಮನಸ್ಸು ನಿರ್ಮಲತೆಯಿಂದ ಜವಾಬ್ದಾರಿ ಹೆಚ್ಚಾಗಿಸಿದೆ. ನಾಡು, ನುಡಿ, ನೆಲ, ಜಲ, ರೈತಾಪಿ ಜನರ ಏಳ್ಗೆ ಸದಾ ಹಸಿರಾಗಿಸಲಿ ಎಂದರು.

ಇದಕ್ಕೂ ಮೊದಲು ಮಠದ ಅಂಗಳದಲ್ಲಿನ ಫಲಪ್ರದಾಯಿನಿ ಪಾರ್ವತಿ ದೇವಿಯ ಗರ್ಭಗುಡಿಯಲ್ಲಿ ಶ್ರೀಚಕ್ರವನ್ನು ಪ್ರತಿಷ್ಠಾಪಿಸಲಾಯಿತು. ಜತೆಗೆ ಪಿರಮಿಡ್ ಧ್ಯಾನ ಕೇಂದ್ರದ ಶಂಕುಸ್ಥಾಪನೆಯನ್ನು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.

ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಎಂ.ಶಿವಣ್ಣ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ದಯಾಶಂಕರ್, ಬಿಜೆಪಿ ಯುವ ಮುಖಂಡ ಎಸ್. ಸಚ್ಚಿದಾನಂದ, ಎಚ್.ಎನ್.ವಿಜಯ್, ಕಾಂಗ್ರೆಸ್ ಮುಖಂಡ ಎಂ.ಎಸ್.ಚಿದಂಬರ್, ಷಣ್ಮುಖ ಹಡಗದ್, ವಾಸ್ತು ತಜ್ಞ ಶ್ರೀಧರ್ ಪರಿಮಳಾಚಾರ್ಯ, ಉಪ ಸಭಾಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ.ಕೆ.ಎಸ್.ಶ್ರೀಪಾದ, ಮಹದೇವ ಪ್ರಸಾದ್, ಎಸ್.ಸಿ.ಅರವಿಂದ್ ಸೇರಿದಂತೆ ಹಲವರು ಆಗಮಿಸಿ ಶುಭಕೋರಿ ಹಾರೈಸಿದರು.

ಆಶ್ರಮದ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಕಾರ್ಯದರ್ಶಿ ಟಿ.ಪಿ.ಶಿವಕುಮಾರ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನಿವೃತ್ತ ಉಪನಿರ್ದೇಶಕ ಕೆ.ಎಸ್.ಶಿವಲಿಂಗಪ್ಪ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net