ಪುರಸಭೆ ಎದುರಿನ ಪ್ರತಿಭಟನೆ ಅಂತ್ಯ

The protest in front of the municipality is over
ಇಂಡಿ ಪುರಸಭೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರು ಹಾಗೂ ವ್ಯಾಪಾರಸ್ಥರು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಅವರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ಹಿಂಪಡೆದರು. ಅನೀಲಗೌಡ ಬಿರಾದಾರ, ಕಾಸುಗೌಡ ಬಿರಾದಾರ, ದೇವೆಂದ್ರ ಕುಂಬಾರ, ಮುತ್ತು ದೇಸಾಯಿ, ವಿಜು ಮೂರಮನ್, ಅಶೋಕ ಅಕಲಾದಿ, ಎಸ್.ಎಸ್. ಕೂಡಿಗನೂರ ಇತರರಿದ್ದರು.
Published on

ಇಂಡಿ : ಪಟ್ಟಣದ ಪುರಸಭೆ ಮುಂಭಾಗದಲ್ಲಿ ಪುರಸಭೆ ಸದಸ್ಯರು ಹಾಗೂ ವ್ಯಾಪಾರಸ್ಥರು ಮೂರು ದಿನದಿಂದ ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಅಬೀದ್ ಗದ್ಯಾಳ್ ಸೋಮವಾರ ಭೇಟಿ ನೀಡಿ, ಸದಸ್ಯರು ಹಾಗೂ ವ್ಯಾಪಾರಸ್ಥರ ಮನವೊಲಿಸಿದರು.

ಸದಸ್ಯರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ, ಮುಖ್ಯಾಧಿಕಾರಿಗಳನ್ನು ವರ್ಗಾವಣೆ ಮಾಡುವುದು ಬೇಡ, ವ್ಯಾಪಾರಸ್ಥರಿಗೆ ಹಾಕಿದ ದಂಡ ಹಿಂಪಡೆಯಲಾಗುವುದು ನಿಮ್ಮ ನಿಮ್ಮ ವಾರ್ಡ್‌ಗಳಲ್ಲಿ ಆರ್ಥಿಕ ಸಂಪನ್ಮೂಲ ಗಮನಿಸಿ ಅಭಿವೃದ್ಧಿ ಕೈಗೊಳ್ಳುವ ಭರವಸೆ ನೀಡಿದ ನಂತರ ಸದಸ್ಯರು, ವ್ಯಾಪಾರಸ್ಥರು ಪ್ರತಿಭಟನೆ ಹಿಂಪಡೆದರು.

ಅನೀಲಗೌಡ ಬಿರಾದಾರ, ಕಾಸುಗೌಡ ಬಿರಾದಾರ, ದೇವೆಂದ್ರ ಕುಂಬಾರ, ಮುತ್ತು ದೇಸಾಯಿ, ವಿಜು ಮೂರಮನ್, ಅಶೋಕ ಅಕಲಾದಿ, ಎಸ್.ಎಸ್. ಕೂಡಿಗನೂರ, ರಾಚು ಬಡಿಗೇರ, ವಿವೇಕಾನಂದ ಬಡಿಗೇರ, ಮಚೆಂದ್ರ ಕದಮ್, ಅಪ್ಪು ಪವಾರ, ಸೋಮಶೇಖರ ಬಿರಾದಾರ, ಶಾಂತು ಧನಶ್ರೀ, ಅಪ್ಪು ಪವಾರ, ಪ್ರತಾಪ ಹಲವಾಯಿ, ಸಂಜು ಪವಾರ, ಮಹಾವೀರ ಧನಶೆಟ್ಟಿ, ಅದೃಷ್ಯಪ್ಪ ವಾಲಿ, ಸಂಜು ದಶವಂತ, ಸುರೇಶ ಏವೂರ, ಬಾಳೂ ಮುಳಜಿ, ಸಂತೋಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net