More

    165 ಆಸರೆ ಮನೆಗಳು ಮಂಜೂರು

    ನಾಲತವಾಡ: ಸರ್ಕಾರದ ನಾನಾ ಯೋಜನೆಗಳು ಗ್ರಾಮ ಮಟ್ಟದಲ್ಲಿ ಪ್ರತಿ ಆಸರೆ ಮನೆಗಳು ಕುಟುಂಬಕ್ಕೂ ತಲುಪಿಸುವ ಉದ್ದೇಶವನ್ನು ಗ್ರಾಮಸಭೆಗಳು ಹೊಂದಿವೆ.

    ಈ ನಿಟ್ಟಿನಲ್ಲಿ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸಹಕರಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹಿಂದುಳಿದ ವರ್ಗಗಳ ತಾಲೂಕಾಧಿಕಾರಿ ಶಿವಲೀಲಾ ಕೊಣ್ಣೂರ ಹೇಳಿದರು.

    ಅಡವಿಸೋಮನಾಳ ಗ್ರಾಪಂ ವ್ಯಾಪ್ತಿಯ ಚವನಬಾವಿಯಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ಸರ್ಕಾರದ ನಾನಾ ಯೋಜನೆಗಳ ಕುರಿತು ಮಾತನಾಡಿದ ಅವರು, ಈಗಾಗಲೇ ಬಸವ ವಸತಿ ಯೋಜನೆಯಡಿ 165 ಆಸರೆ ಮನೆಗಳನ್ನು ವಿತರಿಸಬೇಕಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ 15 ಮನೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.

    ಅರ್ಹರು ಶೀಘ್ರವೇ ಸೂಕ್ತ ದಾಖಲೆಗಳನ್ನು ಒದಗಿಸಬೇಕು. ನರೇಗಾದಡಿ ವೈಯಕ್ತಿಕ ಕಾಮಗಾರಿಗಳನ್ನು ಹಮ್ಮಿಕೊಳ್ಳುವ ಅವಕಾಶಗಳಿದ್ದು, ರೈತರು ಸದುಪಯೋಗ ಪಡೆದುಕೊಳ್ಳಿ ಎಂದರು.

    ವಸತಿ ಯೋಜನೆಗಳ ಕುರಿತು ಗುರಡ್ಡಿ ಬಿರಾದಾರ, ಉಮೇಶ ಮಾಟೂರ, ಪಿಡಿಒ ವಿಜಯಮಹಾಂತೇಶ ಕೋರಿ ಮಾತನಾಡಿ, ಚವನಬಾವಿ ಗ್ರಾಮಕ್ಕೆ-50, ಅಡವಿ ಸೋಮನಾಳ-40, ಅಡವಿ ಹುಲಗಬಾಳ-30, ಡೋಮಕಮಡು-20, ಕ್ಯಾತನಡೋಣಿ-10 ಆಸರೆ ಮನೆಗಳು ಮಂಜೂರಾಗಿವೆ. ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

    ಇದನ್ನೂ ಓದಿ: ಕೀಳರಿಮೆ ತೊರೆದು ಸ್ವಾವಲಂಬಿಗಳಾಗಿ ಬದುಕಿ; ಸಚಿವ ಡಾ.ಎಂ.ಬಿ.ಪಾಟೀಲ

    ಕಳೆದ ಹಲವು ವರ್ಷಗಳಿಂದ ಆಸರೆ ಮನೆಗಳಿಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅವುಗಳನ್ನು ಕೂಲಕುಂಶವಾಗಿ ಪರಿಶೀಲನೆ ಮಾಡಬೇಕು. ಈಗಲೂ ಅರ್ಜಿ ಸಲ್ಲಿಸಿದವರಲ್ಲಿ ಹಿಂದೆ ಆಸರೆ ಮನೆಗಳನ್ನು ಪಡೆದಿದ್ದಾರೆ.

    ಅಂತಹ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಅಡವಿ ಹುಲಗಬಾಳ ಹಾಗೂ ಅಡವಿ ಸೋಮನಾಳದ ಗ್ರಾಮಸ್ಥರು ಅಧಿಕಾರಿಗಳಿಗೆ ಒತ್ತಾಯಿಸಿದರು.
    ಗ್ರಾಮದಲ್ಲಿ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ರೈತರ ಜಮೀನಗಳಿಗೆ ಹಾದಿ ನಿರ್ಮಾಣ, ಗ್ರಾಮದಲ್ಲಿ ಅಂಗನವಾಡಿ ಕೊಠಡಿ ನಿರ್ಮಾಣ, ನಾನಾ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸೌಕರ್ಯ ಒದಗಿಸಿ ಕೊಡಿ ಎಂಬ ವಿವಿಧ ಮನವಿಗಳನ್ನು ಸಾರ್ವಜನಿಕರಿಂದ ಅಧಿಕಾರಿಗಳು ಸ್ವೀಕರಿಸಿದರು.

    ಸಭೆಯಲ್ಲಿ ಮಧ್ಯ ಪ್ರವೇಶಿಸಿದ ರೈತನೊಬ್ಬ ನನ್ನ ಜಮೀನಿನಲ್ಲಿ ನರೇಗಾದಡಿ ಬದು ನಿರ್ಮಾಣ ಮಾಡಿದ್ದೇವೆ ಎಂದು ಹಲವು ಸದಸ್ಯರು ಬದು ನಿರ್ಮಾಣ ಮಾಡದೇ ಬೋಗಸ್ ಬಿಲ್ ಪಡೆದುಕೊಂಡಿದ್ದಾರೆ. ಅವರ ಹೆಸರು ಹಾಗೂ ದಾಖಲೆಗಳನ್ನು ಒದಗಿಸಿ ಎಂದು ಪಟ್ಟು ಹಿಡಿದ ಘಟನೆ ನಡೆಯಿತು.

    ಗ್ರಾಪಂ ಅಧ್ಯಕ್ಷೆ ಸಂಗಮ್ಮ ಹಂಚನಾಳ, ಸದಸ್ಯರಾದ ಆಂಜನೇಯ ಪವಾರ, ಗುರುಬಾಯಿ ಇಳಗೇರ, ಯಮನಪ್ಪ ಚಲವಾದಿ, ದ್ಯಾಮಣ್ಣ ಹಂಚಿನಾಳ, ಅಮರೇಶ ಕೂಡಲಗಿ, ಮುಖ್ಯಶಿಕ್ಷಕ ಎಸ್.ಎಂ. ಜೋಗಿನ, ಅಂಗನವಾಡಿ ಕಾರ್ಯಕರ್ತೆ ಇಂದ್ರಾಬಾಯಿ ಕುಂಬಾರ, ವಿನೋದಾ ಚಿಮ್ಮಲಗಿ, ಶಾಂತಾ ಇಳಗೇರ, ನೀಲಮ್ಮ ಪಾಟೀಲ, ಶಿವಲೀಲಾ ಪತ್ತಾರ, ಸುಮಂಗಲಾ ಹಿರೇಮಠ, ಬಲವಂತ ಜೋಗಿನ, ಬಸವರಾಜ ಬಿರಾದಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts