ಜನವರಿ ವೇಳೆಗೆ ಕರೊನಾದ ಮತ್ತೊಂದು ರೂಪ ಬರಲಿದೆ; ಕಾದು ನೋಡಿ ಎಂದು ಭವಿಷ್ಯ ನುಡಿದ ಕೋಡಿಮಠದ ಶ್ರೀ

Kodimatha Shri
Published on

ಧಾರವಾಡ: ಈ ಸಂವತ್ಸರದ ಪ್ರಾರಂಭದಲ್ಲಿಯೇ ನಾನು ಮಳೆ, ಸಿಡಿಲು, ಬೆಂಕಿ ಕಾಟ, ಮತಾಂಧತೆ ಹೆಚ್ಚುತ್ತೆ, ಸಾವು ನೋವು ಆಗುತ್ತೆ ಅಂತಾ ಹೇಳಿದ್ದೇವು. ಈಗ ಹಾಗೇ ಆಗಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.

ಇನ್ನು ಮುಂದೆಯೂ ಮಳೆ ಆಗುವ ಲಕ್ಷಣ ಇದೆ. ಕಾರ್ತಿಕ ಮಾಸದಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗುಡಾಯಿಸುತ್ತದೆ. ಕಾಡಿನಿಂದ ನಾಡಿಗೆ ಪ್ರಾಣಿಗಳ ಪ್ರವೇಶ ಆಗುತ್ತವೆ. ಭೂಮಿಯೊಳಗೆ ವಿಷಜಂತುಗಳು ಹೊರಗೆ ಬಂದು ತೊಂದರೆ ಮಾಡುತ್ತವೆ. ಹೊರಗಡೆ ಹೋಗುವಾಗ ಒಂದು ಬಡಗಿ ಹಿಡಿದುಕೊಂಡು ಹೋಗಬೇಕು ಎಂದು ಭವಿಷ್ಯ ನುಡಿದಿದ್ದಾರೆ.

ಕಾದು ನೋಡಿ, ಸದ್ಯದಲ್ಲೇ ರಾಜ್ಯದಲ್ಲಿ ಅವಘಡ ಸಂಭವಿಸಲಿದೆ. ಪ್ರಕೃತಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಲಿದ್ದು, ಬೆಂಕಿಯಿಂದ ಹೆಚ್ಚೆಚ್ಚು ಸಮಸ್ಯೆಯಾಗಲಿದೆ. ರಾಜ್ಯದಲ್ಲಿ ಅಪಮೃತ್ಯುವಿನ ಸಂಖ್ಯೆ ಹೆಚ್ಚಲಿದೆ. ಈ ವರ್ಷ ಕಳೆಯುತ್ತಿದ್ದಂತೆ ಕರೊನಾ ಮತ್ತೆ ಹೆಚ್ಚಾಗುತ್ತದೆ.ಕರೊನಾ ರೂಪಕ್ಕೆ ಮತ್ತೊಂದು ರೂಪದ ಲಕ್ಷಣಗಳಿವೆ. ಈ ರೋಗ ಬಂದು ಹೋಗುವಾಗ ಬಹಳ ಕಷ್ಟ ಕೊಟ್ಟು ಹೋಗುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net