

ನವದೆಹಲಿ: ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 700 ರೂ. ಕಡಿಮೆಯಾಗಿದೆ.
ಮಂಗಳವಾರ 10 ಗ್ರಾಂಗೆ 99,120 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಬುಧವಾರ 98,420 ರೂ.ಗೆ ಇಳಿಯಿತು. 98,600 ರೂ. ಇದ್ದ ಶೇ. 99.5ರಷ್ಟು ಶುದ್ಧತೆಯ ಚಿನ್ನ ಬುಧವಾರ 600 ರೂ. ಕಡಿಮೆಯಾಗಿ 98,000 ರೂ.ಗೆ ಇಳಿಯಿತು. ಮಂಗಳವಾರ ಕೆಜಿಗೆ 1,04,800 ರೂ. ಇದ್ದ ಬೆಳ್ಳಿಯ ಬೆಲೆ ಬುಧವಾರ 800 ರೂ. ಕಡಿಮೆಯಾಗಿ 1,04,000 ರೂ.ಗೆ ಇಳಿಯಿತು.