ಯಾರೇ ಅಧ್ಯಕ್ಷರಾದರೂ ಕುಮಾರಸ್ವಾಮಿಯದ್ದೇ ಅಧಿಕಾರ!

Chaluvarayaswamy
Published on

ಬೆಂಗಳೂರು: ಜೆಡಿಎಸ್‌ಗೆ ಯಾರೇ ಅಧ್ಯಕ್ಷರಾದರೂ ಕುಮಾರಸ್ವಾಮಿಯದ್ದೇ ಅಧಿಕಾರ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಟಾಂಗ್ ಕೊಟ್ಟರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಉಚ್ಛಾಟನೆ ಮಾಡಿದರೂ ಅಷ್ಟೆ. ಯಾರು ಅಧ್ಯಕ್ಷರಾದರೂ ಅಷ್ಟೆ. ಕುಮಾರಸ್ವಾಮಿಯವರೇ ಅಧ್ಯಕ್ಷರು. ಬೇರೆಯವರು ಅಧ್ಯಕ್ಷರಾದ್ರೂ ಕುಮಾರಸ್ವಾಮಿನೇ ಅಧ್ಯಕ್ಷರು. ಅದೇನು ನಾವು ನೋಡದೆ ಇರುವುದು ಏನಲ್ಲ. ಅದರಲ್ಲಿ ವಿಶೇಷವೇನಿಲ್ಲ. ಅನುಭವ ಇದ್ದು ಇಬ್ರಾಹಿಂ ಅಲ್ಲಿಗೆ ಹೋಗಿದ್ದರು. ಅವರು ಕಾಂಗ್ರೆಸ್‌ನಲ್ಲೇ ಇದ್ದಿದ್ದರೆ ಗೌರವ ಇರುತ್ತಿತ್ತು ಎಂದು ಚಲುವರಾಯಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net