ನಟಿ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಹಲ್ಲೆ ಪ್ರಕರಣ: ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು

Harshika Poonacha
Published on

ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಹಲ್ಲೆ ಸಂಬಂಧ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಇಬ್ಬರ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಹರ್ಷಿಕಾ ಪತಿ ಭುವನ್ ನೀಡಿದ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
ಎ್ಐಆರ್‌ನಲ್ಲಿ ಏನಿದೆ?
ಏ.೨ ರಂದು ಪುಲಿಕೇಶಿನಗರದ ಮಾಸ್ಕ ರಸ್ತೆಯಲ್ಲಿರುವ ಹೊಟೇಲ್ವೊಂದರಲ್ಲಿ ಊಟ ಮುಗಿಸಿ ದಂಪತಿ ಪಾರ್ಕಿಂಗ್‌ನಲ್ಲಿದ್ದ ಕಾರನ್ನು ಹಿಂತೆಗೆದುಕೊಳ್ಳುವಾಗ ಇಬ್ಬರು ಕಿಡಿಗೇಡಿಗಳು ಜಗಳ ತೆಗೆದು ಹಲ್ಲೆಗೆ ಯತ್ನಿಸಿದ್ದರು. ಈ ಲೋಕಲ್ ಕನ್ನಡದವ್ರಿಗೆ ಬುದ್ದಿ ಕಲಿಸಬೇಕು ಅಂತಾ ನಿಂದಿಸಿದ್ದರು ನಂತರ ನನ್ನ (ಭುವನ್) ಕುತ್ತಿಗೆಯಲ್ಲಿದ್ದ ಚೈನ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ವಿಡಿಯೋ ಮಾಡಲು ಯತ್ನಿಸಿದ ಹರ್ಷಿಕಾ ಮೊಬೈಲ್ ಕಸಿಯಲು ಯತ್ನಿಸಿದ್ದರು. ಈ ವೇಳೆ ಜಮಾಯಿಸಿದ್ದ ಸುಮಾರು ೨೦-೩೦ ಜನರ ಗುಂಪು. ಉರ್ದು ಭಾಷೆಯಲ್ಲಿ ತನ್ನನು ನಿಂಧಿಸಿದ್ದಾರೆ. ಹರ್ಷಿಕಾರನ್ನು ನೋಡಿ ಕನ್ನಡದವರು ಇಷ್ಟು ಬೆಳ್ಳಗೆ ಇರುವುದಿಲ್ಲ. ನಮ್ಮ ಏರಿಯಾ ಹುಡುಗಿಯನ್ನು ಕರೆದುಕೊಂಡು ಹೋಗುತ್ತಿದ್ದಾನೆ ಅಂತಾ ಕಾರನ್ನು ತಡೆದು ಹಾನಿ ಮಾಡಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿರುವ ಪೊಲೀಸರು ಮೊಬೈಲ್ ನಲ್ಲಿ ಸೆರೆಹಿಡಿರುವ ಇಬ್ಬರು ವ್ಯಕ್ತಿಗಳ ಭಾವಚಿತ್ರ ಆಧರಿಸಿ ಹುಡುಕಾಟವನ್ನು ತೀವ್ರಗೊಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net