ಮರಿಗಳೊಂದಿಗೆ ಹುಲಿ ಇರುವ ಚಿತ್ರ ಸುಳ್ಳು

28 SARAG 1
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಚಿತ್ರ
Published on

ಸರಗೂರು: ತಾಲೂಕಿನ ಬೆಣ್ಣೆಗೆರೆ ಗ್ರಾಮದ ಜಮೀನಿನಲ್ಲಿ ರೈತನ ಬಲಿ ಪಡೆದ ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು, ಡ್ರೋನ್ ಕ್ಯಾಮರಾಗೆ ಹುಲಿಯು 3 ಹುಲಿ ಮರಿಗಳೊಂದಿಗೆ ಇರುವ ಚಿತ್ರ ಚಿತ್ರಿಕರಣಗೊಂಡಿರುವುದು ಸುಳ್ಳು. ಇದು ನುಗು ವಲಯಕ್ಕೆ ಸಂಬಂಧಿಸಿದ ಚಿತ್ರವಲ್ಲ ಎಂದು ಹೆಡಿಯಾಲ ಉಪ ವಿಭಾಗದ ಎಸಿಎಫ್ ಡಿ.ಪರಮೇಶ್ ತಿಳಿಸಿದ್ದಾರೆ.

ಅರಣ್ಯ ಇಲಾಖೆಯು ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದು, ಹುಲಿ ಚಲನವಲನಗಳ ಬಗ್ಗೆ ಅತಿ ಸೂಕ್ಷ್ಮವಾಗಿ ನಿಗಾ ವಹಿಸಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಬೆಣ್ಣೆಗೆರೆ ಗ್ರಾಮದಲ್ಲಿ 3 ಹುಲಿ ಮರಿಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ಚಿತ್ರವನಗನು ಭಿತ್ತರಿಸುತ್ತಿರುವುದು ಸುಳ್ಳು. ಇದರಿಂದ ಸಾರ್ವಜನಿಕರು ಭಯಭೀತರಾಗದೆ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಸಹಕರಿಸಬೇಕು. ಸುಳ್ಳು ಸಂದೇಶಗಳನ್ನು ಭಿತ್ತರಿಸುವವರ ವಿರುದ್ಧ ಇಲಾಖೆ ನಿಯಮಾನುಸಾರ ಕ್ರಮವಹಿಸಲಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net