

ಕೆ.ಆರ್.ಪೇಟೆ: ಮುಂಬೈನಿಂದ ಬಂದು ಕ್ವಾರಂಟೈನ್‌ನಲ್ಲಿರುವ ಜನರಿಗೆ ಊಟ ಕೊಟ್ಟರೆ ಅದು ಚೆನ್ನಾಗಿಲ್ಲ ಎಂಬ ನೆಪದಲ್ಲಿ ಮನಸೋ ಇಚ್ಛೆ ಎಲ್ಲೆಂದರಲ್ಲಿ ಬಿಸಾಡಿ ಉದ್ಧಟತನ ತೋರಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿರಿ ತಾಯಿಯ ಶವದ ಜತೆಯಲ್ಲೇ 5 ದಿನ ಇದ್ದ ಮಗಳು!
ಊಟ ಬಿಸಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಎಂ. ಶಿವಮೂರ್ತಿ, ‘‘ಕ್ವಾರಂಟೈನ್‌ನಲ್ಲಿ ಇರುವವರು ಮನೆಯಿಂದ ಊಟ ತರಿಸಿಕೊಳ್ಳಲು ಬಯಸಿದ್ದರು. ಇದಕ್ಕೆ ಒಪ್ಪದೇ ಇದ್ದುದರಿಂದ ಈ ರೀತಿ ಮಾಡಿದ್ದಾರೆ. ಅಷ್ಟೇ ಅಲ್ಲ, ಕ್ವಾರಂಟೈನ್‌ನಲ್ಲಿರುವ ಕೆಲವರು ಮದ್ಯ ತರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನು ತಾಲೂಕು ಆಡಳಿತ ತಡೆದಿದೆ’’ ಎಂದು ವಿವರಿಸಿದ್ದಾರೆ.