ಶಾಂತ ಮನಸಿಗೆ ಮಾರ್ಗ

photo-1-68b72c61c0bce
Published on
ದೊಡ್ಡ ದುರಂತವೆಂದರೆ ನಾವು ಭಗವಂತನನ್ನು ನಂಬುವುದಿಲ್ಲ. ಆದ್ದರಿಂದ ನಮ್ಮ ಮನಸ್ಸು ಯಾವಾಗಲೂ ಜೀವನದ ಘಟನೆಗಳ ಬಗ್ಗೆ ಚಿಂತಿಸುವುದರಲ್ಲಿ ನಿರತವಾಗಿರುತ್ತದೆ. ಅದು ಎಂದಿಗೂ ವಿಶ್ರಾಂತಿ ಪಡೆಯುವುದಿಲ್ಲ. ಮಹಾನ್ ಸಂತ ಕಬೀರ್ ಪ್ರತಿನಿತ್ಯ ವಾಯುವಿಹಾರಕ್ಕೆ ಹೋಗುತ್ತಿದ್ದರು, ಹಾಗೆ ಹೋಗುವ ದಾರಿಯಲ್ಲಿ ಅವರು ಯಾವಾಗಲೂ ಹೊಲದಲ್ಲಿ ಕುಳಿತಿರುವ ವ್ಯಕ್ತಿಯೊಬ್ಬನನ್ನು ಕಾಣುತ್ತಿದ್ದರು.

ಕಬೀರರು ಅವನಿಗೆ ತಮ್ಮಾ, ನೀನು ಹೊಲದಲ್ಲಿ ಸೋಮಾರಿಯಾಗಿ ಕುಳಿತುಕೊಳ್ಳುವ ಬದಲು ನಿನ್ನ ಸಮಯವನ್ನು ಯಾವುದಾದರೂ ಆಧ್ಯಾತ್ಮಿಕ ಸಾಧನೆಯಲ್ಲಿ ಕಳೆಯುವುದು ಉತ್ತಮವಲ್ಲವೇ?. ಎಂದರು. ಅದಕ್ಕೆ ಅವನು, ‘ನನಗೆ ತುಂಬಾ ಚಿಕ್ಕ ಮಕ್ಕಳಿದ್ದಾರೆ ಮತ್ತು ಅವರು ದೊಡ್ಡವರಾದ ನಂತರವೇ ಆಧ್ಯಾತ್ಮಿಕ ಸಾಧನೆಗೆ ಸಮಯವನ್ನು ನೀಡಲು ಸಾಧ್ಯವಾಗುತ್ತದೆ’ಎಂದು ಉತ್ತರಿಸಿದ.

ಮಕ್ಕಳು ದೊಡ್ಡವರಾದ ನಂತರ, ಕಬೀರ್ ಆ ವ್ಯಕ್ತಿಯನ್ನು ಮತ್ತೆ ಭೇಟಿಯಾದರು. ‘ಮಕ್ಕಳೆಲ್ಲ ದೊಡ್ಡವರಾಗಿದ್ದಾರೆ, ನೀವು ಈಗ ಸಾಧನೆಗೆ ಸಮಯ ಕೊಡಬಹುದೇ?’ ಎಂದು ಅವನನ್ನು ಕೇಳಿದರು. ಆಗ ಆ ವ್ಯಕ್ತಿ, ‘ಈಗ ನಾನು ಮಕ್ಕಳ ಮದುವೆಗಾಗಿ ಕಾಯಬೇಕು, ಆಗ ಅವರು ಸ್ವತಂತ್ರವಾಗಿ ತಮ್ಮನ್ನು ತಾವು ನೋಡಿಕೊಳ್ಳಬಹುದು. ಆಗ ನಾನು ನನ್ನನ್ನು ಧ್ಯಾನದಲ್ಲಿ ತೊಡಗಿಸಿಕೊಳ್ಳಲು ಸಮಯ ಸಿಗುತ್ತದೆ’ ಎಂದ. ಹೀಗೆ ಕೆಲವು ವರ್ಷಗಳು ಕಳೆದವು.

ಸಂತ ಕಬೀರ್ ಮತ್ತೊಮ್ಮ ಆ ವ್ಯಕ್ತಿಯನ್ನು ಭೇಟಿಯಾದರು ಮತ್ತು ಹೇಳಿದರು: ‘ಈಗ, ನೀನು ಅದೃಷ್ಟಶಾಲಿ, ನಿನ್ನ ಎಲ್ಲಾ ಮಕ್ಕಳು ಮದುವೆಯಾಗಿದ್ದಾರೆ, ಆದ್ದರಿಂದ ನೀವು ನಿಸ್ಸಂದೇಹವಾಗಿ ಆಧ್ಯಾತ್ಮಿಕ ಸಾಧನೆಗಾಗಿ ನಿಮ್ಮನ್ನು ಅರ್ಪಿಸಿಕೊಳ್ಳುತ್ತಿರಿ? ಅಲ್ಲವೇ!’ ಎಂದು ಕೇಳಿದರು. ಆಹಾ, ಎಂದ ಆ ವ್ಯಕ್ತಿ ಉತ್ತರಿಸಿದರು: ನನ್ನ ಮೊಮ್ಮಕ್ಕಳು ಬೆಳೆಯಬೇಕು. ಅವರು ದೊಡ್ಡವರಾಗಿ ಮದುವೆಯಾಗುವುದನ್ನು ನೋಡಲು ನಾನು ಉತ್ಸುಕನಾಗಿದ್ದೇನೆ ಎಂದು. ಇದು ನಡೆದ ನಂತರ, ಕಬೀರ್ ಮತ್ತೆ ಆ ವ್ಯಕ್ತಿಯನ್ನು, ಈಗ ನಿನ್ನ ಬಯಕೆಯೇನು ಸ್ನೇಹಿತ? ಎಂದು ಕೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net