ವಂದೇ ಭಾರತ್ ರೈಲಿನಲ್ಲಿ ಬ್ಯಾಗ್ ಬಿಟ್ಟ ಪ್ರಯಾಣಿಕ; ಅದರಲ್ಲಿ ಏನಿತು..!

SI
Published on

ಬೆಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಯಲ್ಲಿ ಪ್ರಯಾಣಿಕ ಬಿಟ್ಟು ಹೋಗಿದ್ದ ಎಲೆಕ್ಟ್ರಾನಿಕ್ ವಸ್ತುಗಳು ಒಳಗೊಂಡ ಬ್ಯಾಗ್‌ನ್ನು ಪತ್ತೆ ಮಾಡಿ ರೈಲ್ವೇ ಪೊಲೀಸರು ಹಿಂತಿರುಗಿಸಿದ್ದಾರೆ.

ಸೆ.10ರಂದು ರಾಹುಲ್ ಎಂಬಾತ ಚೆನ್ನೈಯಿಂದ ಬೆಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಮಾರ್ಗಮಧ್ಯೆದಲ್ಲಿ ತಿಂಡಿತಿನಿಸು ಖರೀದಿಸಲು ಕಟಪಾಡಿಯಲ್ಲಿ ರೈಲಿನಿಂದ ಇಳಿದಿದ್ದು, ಅಷ್ಟೊತ್ತಿಗೆ ರೈಲು ಚಲಿಸಲು ಶುರು ಮಾಡಿದಾಗ ಒಳಗೆ ಏರಲು ಸಾಧ್ಯವಾಗಿಲ್ಲ. ಕೊನೆಗೆ ರಾಹುಲ್ ಬ್ಯಾಗ್ ರೈಲಿನಲ್ಲಿ ಉಳಿದುಕೊಂಡಿತ್ತು.

ಈ ಬಗ್ಗೆ ರೈಲ್ವೆ ಟಿಟಿಇ ಜಯಕುಮಾರ್ ಸಹಾಯದಿಂದ ಬೆಂಗಳೂರಿನ ರೈಲ್ವೆ ಸಬ್‌ಇನ್‌ಸ್ಪೆಕ್ಟರ್ ಸತ್ಯನಾರಾಯಣಗೆ ಮಾಹಿತಿ ನೀಡಿದ್ದರು. ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ರೈಲು ಬರುತ್ತಿದಂತೆ ಬ್ಯಾಗ್‌ನ್ನು ವಶಕ್ಕೆ ಪಡೆದು ಪ್ರಯಾಣಿಕ ರಾಹುಲ್‌ಗೆ ತಲುಪಿಸಿದ್ದಾರೆ. ಬ್ಯಾಗ್‌ನಲ್ಲಿ 4 ಲಕ್ಷ ರೂ. ಮೌಲ್ಯದ ವಸ್ತುಗಳು ಇದ್ದವು ಎಂದು ರೈಲ್ವೇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net