ಹಣ ಪಾವತಿಸಿಕೊಂಡು ಬೈಕ್ ನೀಡದೆ ವಂಚಿಸಿದ ಶೋ ರೂಮ್ ಮಾಲೀಕ

Crime Logo
Published on

ಬೆಂಗಳೂರು: ಹಣ ಪಾವತಿಸಿಕೊಂಡು ಗ್ರಾಹಕರಿಗೆ ಹೊಸ ಬೈಕ್ ನೀಡದೆ ಇತ್ತ ಹಣವು ವಾಪಸು ನೀಡದೆ ವಂಚಿಸುತ್ತಿದ್ದ ಬೈಕ್ ಶೋ ರೂಮ್ ಮಾಲೀಕ ಸೇರಿ ಇನ್ನಿತರರ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.
ಕೋರಮಂಗಲ ನಿವಾಸಿ ಭುವನೇಶ್ವರ್ ಎಂಬುವರು ನೀಡಿದ ದೂರಿನ ಮೇರೆಗೆ ಸ್ಮೃತಿ ಮೋರ್ಟಾಸ್ ಶೋ ರೂಮ್ ಮಾಲೀಕ ವಿಜಯ್ ಕುಮಾರ್, ಕೆಲಸಗಾರನಾಗಿದ್ದ ಕಿಶೋರ್ ಮತ್ತು ಇತರರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಗ್ರಾಹಕ ಭುವನೇಶ್ವರ್ ಎಂಬುವವರು ಜಾವ-೪೨ ಎಂಬ ಹೆಸರಿನ ಬೈಕ್ ಖರೀದಿಸುವ ಸಲುವಾಗಿ ಜಸ್ಟ್ ಡಯಲ್ಗೆ ಕರೆ ಮಾಡಿ ಇಮ್ಮಡಿಹಳ್ಳಿಯಲ್ಲಿರುವ ಸ್ಮೃತಿ ಮೋಟರ್ಸ್ ಶೋ ರೂಮ್ ನಂಬರ್ ಪಡೆದುಕೊಂಡಿದ್ದರು. ಅನಂತರ ಶೋ ರೂಮ್ನ ಕಿಶೋರ್ ಎಂಬಾತ ಕರೆ ಮಾಡಿ ಭುವನೇಶ್ವರ್ ಕೇಳಿದ ಹೊಸ ಬೈಕ್ ಬಗ್ಗೆ ಮಾಹಿತಿ ನೀಡಿ ೨.೫೮ ಲಕ್ಷ ರೂ. ಕೊಟೆಷನ್ ಕಳುಹಿಸಿ ಹೆಚ್ಚಿನ ಮಾಹಿತಿಗಾಗಿ ಶೋ ರೂಮ್‌ಗೆ ಬರುವಂತೆ ಲೊಕೇಷನ್ ಕಳುಹಿಸಿದ್ದ. ಅದರಂತೆ ಶೋ ರೂಮ್ಗೆ ಬಂದಾಗ, ಮಾಲೀಕ ವಿಜಯ್ ಕುಮಾರ್‌ನೊಂದಿಗೆ ಮಾತನಾಡಿ ಮುಂಗಡವಾಗಿ ೯೫ ಸಾವಿರ ರೂ.ಪಾವತಿಸಿದ್ದರು. ಕೆಲ ದಿನಗಳ ಬಳಿಕ ಜಾವಾ ಬೈಕ್ ಕಂಪನಿಗೆ ಪೂರ್ಣ ಹಣ ಸಂದಾಯ ಮಾಡಬೇಕೆಂದು ಹೇಳಿ ಆರೋಪಿತರು ಹಂತ ಹಂತವಾಗಿ ೩ ಲಕ್ಷ ರೂ.ಹಣ ಕಟ್ಟಿಸಿಕೊಂಡಿದ್ದರು. ಒಂದು ವಾರದ ಬಳಿಕ ಬೈಕ್ ನೀಡುವುದಾಗಿ ಹೇಳಿದ್ದರು. ಅದರಂತೆ ಒಂದು ವಾರದ ಬಳಿಕ ಶೂರೂಮ್ಗೆ ಹೋಗಿ ನೋಡಿದ್ದಾರೆ. ಆದರೆ ಶೋರೂಮ್ ಮುಚ್ಚಿದ್ದು, ನಂತರ ೆನ್ ಮಾಡಿದ್ದಾರೆ ೆನ್ ಸ್ವಿಚ್ ಆ್ ಬಂದಿದೆ. ಇದರಿಂದ ತಾವು ಮೋಸ ಹೋಗಿರುವುದಾಗಿ ಗೊತ್ತಾಗಿದೆ. ಈ ಸಂಬಂಧ ವೈಟ್‌ಫೀಲ್ಡ್ ಠಾಣೆ ಪೋಲಿಸರಿಗೆ ದೂರು ನೀಡಿದ್ದಾರೆ.
ಹಲವು ಗ್ರಾಹಕರಿಗೆ ವಂಚನೆ
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿಗಳು ಇದೇ ರೀತಿ ಹಲವು ಗ್ರಾಹಕರಿಗೆ ವಂಚಿರುವುದು ಗೊತ್ತಾಗಿದೆ. ಆರೋಪಿಗಳು ಫೈನಾನ್ಸ್ ಕಂಪನಿಗಳೊಂದಿಗೆ ಶಾಮೀಲಾಗಿ ವಂಚಿರುವ ಸಾಧ್ಯತೆಯಿದೆ. ಹಣ ಕಟ್ಟಿದ ಗ್ರಾಹಕರಿಗೆ ಬೈಕ್ ಇಲ್ಲ. ಹಣವು ಇಲ್ಲ ಎಂದು ಅರಿತು ಕಂಗಲಾಗಿದ್ದಾರೆ. ಸದ್ಯ ವೈಟ್‌ಫೀಲ್ಡ್ ಪೊಲೀಸರಿಗೆ ೨೧ ಮಂದಿ ದೂರು ನೀಡಿದ್ದಾರೆ. ಈ ಸಂಬಂಧ ಎ್ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಲು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net