

ಬಳ್ಳಾರಿ: ಮಕ್ಕಳು ಮತ್ತು ವೃದ್ಧರಿಗೆ ಬಸ್ಗಳಲ್ಲಿ ಪಯಣ ನಿರ್ಬಂಧದಿಂದಾಗಿ ಬಳ್ಳಾರಿಯಿಂದ ಚಿತ್ರದುರ್ಗದವರೆಗೆ 75 ವರ್ಷದ ಹಿರಿಯರೊಬ್ಬರು ಗಂಟುಮೂಟೆಯೊಂದಿಗೆ ಪಾದಯಾತ್ರೆ ಬೆಳೆಸಿದ್ದಾರೆ.
ಒಂದು ವಾರದ ಹಿಂದೆ ನಗರದಿಂದ ಹೊರಟ ವೃದ್ಧ, ಸಂಡೂರು ಮೂಲಕ ದುರ್ಗಕ್ಕೆ ತೆರಳುತ್ತಿದ್ದು ಒಟ್ಟು 133 ಕಿ.ಮೀ. ಅಂತರವಿದೆ. ಚಿತ್ರದುರ್ಗ ಮೂಲದ ಈ ವೃದ್ಧ ಲಾಕ್ಡೌನ್ಗೂ ಮುನ್ನ ನಗರಕ್ಕೆ ಬಂದಿದ್ದರು. ಇವರ ಹೆಸರು ತಿಳಿದುಬಂದಿಲ್ಲ.