"ಆಸ್ಕರ್' ವಿಜೇತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಇದೇ ಮೊದಲ ಬಾರಿಗೆ ಪ್ರೇಕ್ಷಕರನ್ನು ಫ್ಯಾಂಟಸಿ ಲೋಕಕ್ಕೆ ಕರೆದೊಯ್ಯಲು ಸಿದ್ಧರಾಗಿದ್ದಾರೆ. ಈವರೆಗೆ ಬೌದ್ದಿಕ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ನೋಲನ್, ಇದೀಗ ಮಹಾಕವಿ ಹೋಮರ್ ರಚಿತ "ದ ಒಡೆಸ್ಸಿ'ಯನ್ನು ತೆರೆ ಮೇಲೆ ತರುತ್ತಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಚಿತ್ರ ಮೂಡಿಬರುತ್ತಿದೆ. ಇನ್ನು ಐಮ್ಯಾಕ್ಸ್ ತಂತ್ರಜ್ಞಾನ ಬಳಸಿಕೊಂಡು ಈ ಸಿನಿಮಾ ಚಿತ್ರೀಕರಿಸಲಾಗಿದೆ. ಆ ಮೂಲಕ ಸಂಪೂರ್ಣವಾಗಿ ಐಮ್ಯಾಕ್ಸ್ ಕ್ಯಾಮರಾಗಳಲ್ಲೇ ಚಿತ್ರೀಕರಣಗೊಂಡ ವಿಶ್ವದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಚಿತ್ರಕ್ಕಿದೆ. ಐತಿಹಾಸಿಕ ಸಿನಿಮಾ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಕ್ರಿಸ್ಟೋರ್ ನೋಲನ್ ಮುಂದಾಗುತ್ತಿದ್ದಾರೆ. "ಟ್ರಾಯ್ ಯುದ್ಧ ಮುಗಿದ ಬಳಿಕ ಇಥಾಕಾದ ರಾಜ ಒಡಿಸ್ಸಿಯನ್ ಮನೆಗೆ ಮರಳುವ ಅಪಾಯಕಾರಿ ಪ್ರಯಾಣವೇ ಈ ಚಿತ್ರದ ಕಥೆ. ಇದೇ 17ಕ್ಕೆ ವಿಶ್ವಾದ್ಯಂತ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು, ನಾಳೆಯಿಂದ (ಜೂ.8) ಭಾರತದಲ್ಲಿ ಮುಂಗಡ ಬುಕಿಂಗ್ ಆರಂಭವಾಗಲಿದೆ. ಈ ಚಿತ್ರದಲ್ಲಿ ಮ್ಯಾಟ್ ಡೇಮನ್, ಟಾಮ್ ಹಾಲೆಂಡ್, ಆ್ಯನಾ ಹಾಥ್ವೇ, ಜೆಂಡಾಯಾ, ರಾಬರ್ಟ್ಸ್ ಪ್ಯಾಟಿನ್ಸನ್, ಚಾರ್ಲೀಜ್ ಥೆರಾನ್ ಪ್ರಮುಖ ತಾರಾಗಣದಲ್ಲಿದ್ದಾರೆ.