ರಾಜ್ಯದಲ್ಲಿ 146ಕ್ಕೆ ಏರಿದ ಸೋಂಕಿತರ ಸಂಖ್ಯೆ

Suspected Coronavirus 15 march 20
Published on

ಬೆಂಗಳೂರು: ಕರ್ನಾಟಕದಲ್ಲಿ ಈವರೆಗೆ ಕರೊನಾ ವೈರಸ್‌ ಸೋಂಕಿತರ ಸಂಖ್ಯೆ 146 ತಲುಪಿದೆ. ನಾಲ್ವರು ಮೃತಪಟ್ಟಿದ್ದು, 11 ಮಂದಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

ನಿನ್ನೆ (ಏ.4)ರ ಸಂಜೆ 5 ಗಂಟೆಯಿಂದ ಇಂದು ಬೆಳಗ್ಗೆ 8 ಗಂಟೆಯ ಒಳಗೆ ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಇವರು ಕಳೆದ ಮಾರ್ಚ್‌ 22ರಂದು ದುಬೈನಿಂದ ಭಾರತಕ್ಕೆ ಪ್ರಯಾಣಿಸಿದ್ದರು. ಇಬ್ಬರನ್ನೂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ವಲಸೆ ಜನರಲ್ಲಿ ಹಾಗೂ ಗುಂಪಿನಲ್ಲಿ ವಾಸಿಸುತ್ತಿರುವವರಲ್ಲಿ ಕೆಮ್ಮು ಮತ್ತು ಜ್ವರ ಪ್ರಕರಣಗಳು ವರದಿಯಾದರೆ ಅದನ್ನು ಶೀಘ್ರದಲ್ಲಿ ಪತ್ತೆ ಹಚ್ಚುವ ಸಂಬಂಧ ‘ಆ್ಯಂಟಿಬಾಡಿ’ ಆಧಾರಿತ ರಕ್ತ ಪರೀಕ್ಷೆಯನ್ನು ಪ್ರಾರಂಭಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು ಸಲಹೆ ನೀಡಿದೆ.

ಕರೊನಾ ವೈರಸ್‌ ಕುರಿತಂತೆ ಮಾಹಿತಿ ಬೇಕಿದ್ದರೆ ಉಚಿತ ಆರೋಗ್ಯ ಸಹಾಯವಾಣಿ 104 ಅಥವಾ 9745697456 ಸಂಪರ್ಕಿಸಬಹುದು. ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ. http://www.karnataka.gov.in ಮೊಬೈಲ್‌ ಅಪ್ಲಿಕೇಷ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net