ಕರ್ನಾಟಕದಲ್ಲಿ ಲಕ್ಷ ದಾಟಿತು ಕರೊನಾ ಸೋಂಕಿತರ ಸಂಖ್ಯೆ; ಇಂದೂ 5000ಕ್ಕೂ ಹೆಚ್ಚು ಕೇಸ್​

covid
Published on

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ '5000' ದ ವೇಗದಲ್ಲೇ ಓಡುತ್ತಿದೆ. ಕಳೆದ 24ಗಂಟೆಯಲ್ಲಿ 5324 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ ಲಕ್ಷ ದಾಟಿದ್ದು, 1,01,465ಕ್ಕೆ ಏರಿಕೆಯಾಗಿದೆ.

ಇಂದು ಒಟ್ಟು 1847 ಮಂದಿ ಗುಣಮುಖರಾಗಿ ಡಿಸ್​ಚಾರ್ಜ್ ಆಗಿದ್ದು, ಒಟ್ಟು 75 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಡಿಸ್​ಚಾರ್ಜ್​ ಆದವರ ಸಂಖ್ಯೆ 37,685, ಸಕ್ರಿಯ ಪ್ರಕರಣಗಳು 61,819 ಹಾಗೂ ಮೃತಪಟ್ಟವರ ಸಂಖ್ಯೆ 1953 ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ.

ಬೆಂಗಳೂರಿನಲ್ಲಿ ಇಂದು 1470 ಕರೊನಾ ಪ್ರಕರಣಗಳು ಪತ್ತೆಯಾಗಿದ್ದರೆ, ಬಳ್ಳಾರಿಯಲ್ಲಿ 840, ಕಲಬುರಗಿಯಲ್ಲಿ 631 ಮಂದಿಯಲ್ಲಿ ಕರೊನಾ ದೃಢಪಟ್ಟಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು? ಮೃತಪಟ್ಟವರೆಷ್ಟು? ಇಲ್ಲಿದೆ ನೋಡಿ ಪಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net