ವಿದೇಶಿ ಯುವಕನ ಬರ್ಬರ ಹತ್ಯೆ; ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ ಪೊಲೀಸರು...

Crime 16 April 20
Published on

ಬೆಂಗಳೂರು: ನಗರದಲ್ಲಿ ತಡರಾತ್ರಿ ವಿದೇಶಿ ಯುವಕನೋರ್ವನ ಬರ್ಬರ ಕೊಲೆಯಾಗಿದೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ನೈಜೀರಿಯಾ ಮೂಲದ ಮಿಂಟೋ ಸಂಡೆ ಕೊಲೆಯಾದ ಯುವಕ. ಮಿಂಟೋ ಮತ್ತು ಮನೋಜ್​ ಎಂಬುವನ ನಡುವೆ ಇತ್ತೀಚೆಗಷ್ಟೇ ಜಗಳವಾಗಿತ್ತು. ಮನೋಜ್​ ಕಡೆಯವರೇ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net