8ರಂದು ಭರವಸೆ ಸಿನಿಮಾ ಬಿಡುಗಡೆ

cinema
ಭರವಸೆ ಚಿತ್ರತಂಡ
Published on

ಶಿವಮೊಗ್ಗ: ಆರ್.ಆರ್.ಮೂವಿ ಮೇಕರ್ಸ್‌ ಬ್ಯಾನರ್‌ನಡಿ ನಿರ್ಮಾಣವಾಗಿರುವ ‘ಭರವಸೆ’ ಚಲನಚಿತ್ರ ಆ.8ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಎ.ಎನ್.ಮುತ್ತು ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನಿಮಾದ ಬಹುಪಾಲು ಚಿತ್ರೀಕರಣ ಶಿವಮೊಗ್ಗದಲ್ಲೇ ನಡೆದಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಅನುರಾಧಾ ಭಟ್ ಸೇರಿ ಹಲವರು ಇದಕ್ಕೆ ದನಿ ತುಂಬಿದ್ದಾರೆ ಎಂದು ಹೇಳಿದರು.

ಜೀವನದಲ್ಲಿ ಏನನ್ನೋ ಪಡೆದುಕೊಳ್ಳುವ ಭರವಸೆಯಲ್ಲಿ ನಾವಿರುತ್ತೇವೆ. ಅದೇ ನಿರೀಕ್ಷೆ ಈ ಚಿತ್ರದ ಪ್ರಮುಖ ತಿರುಳಾಗಿರುತ್ತದೆ. ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವಿನ ಪ್ರೇಮದ ಭರವಸೆ ಈ ಚಿತ್ರದಲ್ಲಿದೆ. ವಿನಯರಾಜ್, ಅಹಲ್ಯಾ ಸುರೇಶ್, ಶೋಭರಾಜ್, ಹೊನ್ನವಳ್ಳಿ ಕೃಷ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ ಎಂದರು.

ಚಿತ್ರದ ನಿರ್ಮಾಪಕ ಹಾಗೂ ನಟ ಬಿ.ಸಿ.ನಾಗರಾಜ್, ಸಂತೋಷ್, ಚೇತನಾ ಶೆಟ್ಟಿ, ಗುರುಮೂರ್ತಿ, ಅರ್ಚನಾ ನಿರಂಜನ್, ಸ್ನೇಕ್ ಸುಹಾಸ್, ಸಿದ್ಧಾರ್ಥ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net