

ಬೆಂಗಳೂರು: ಬೆಂಗಳೂರಿನ ರಸ್ತೆಗಳು ಸದಾ ಟ್ರಾಫಿಕ್ನಿಂದ ಕೂಡಿರುತ್ತದೆ. ಕೆಲಸದ ಒತ್ತಡದ ನಡುವೆ ಎಲ್ಲರಿಗೂ ಬೇಗ ತಲುಪಿಬಿಡಬೇಕು. ಹೀಗಾಗಿ ಎಷ್ಟೇ ಕಠಿಣ ರಸ್ತೆ ನಿಯಮ ಹೇರಿದರೂ ಪಾಲಿಸುವವರು ಮಾತ್ರ ಕಡಿಮೆ. ಒಂದಲ್ಲಾ ಒಂದು ಕಾರಣದಿಂದ ರಸ್ತೆ ನಿಯಮ ಉಲ್ಲಘಿಸಿಬಿಡುತ್ತಾರೆ.
ರಸ್ತೆ ನಿಯಮ ಉಲ್ಲಘಿಸಿದ್ದನ್ನು ಪ್ರಶ್ನಿಸಿದರೆ ಬಹುತೇಕರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಪೊಲೀಸರ ಜತೆಗೆ ವಾಗ್ವಾದಕ್ಕೇ ಇಳಿದು ಬಿಡುತ್ತಾರೆ. ಆದರೆ ಬೆಂಗಳುರಿನ ನಿವಾಸಿಯೊಬ್ಬರು ಸಿಗ್ನಲ್ ಜಂಪ್ ಮಾಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಪ್ರಾಮಾಣಿಕತೆ ನೋಡಿದ ಪೊಲೀಸರು ಶಾಕ್ ಆದ್ದಾರೆ.
ಬಾಲ ಕೃಷ್ಣ್ ಬಿರ್ಲಾ ಎಂಬುವುರು ಶಾಂತಿ ನಗರ ಮಾರ್ಗವಾಗಿ ಮನೆಗೆ ಬರುತ್ತಿದ್ದರು. ಈ ವೇಳೆ ಶಾಂತಿ ನಗರದಲ್ಲಿ ಸಿಗ್ನಲ್ ಜಂಪ್ ಮಾಡಿದ್ದಾರೆ. ಮನೆ ತಲುಪುತ್ತಿದ್ದಂತೆ ಸಿಗ್ನಲ್ ಜಂಪ್ ಮಾಡಿರುವ ಬಗ್ಗೆ ಪಾಪ ಪ್ರಜ್ಞೆ ಕಾಡಿದೆ. ತಡ ಮಾಡದೇ 'ಸಾರ್, ಸಿಗ್ನಲ್ ಜಂಪ್ ಮಾಡಿದ್ದೇನೆ' ಎಂದು ಬೆಂಗಳೂರು ಸಂಚಾರ ಪೊಲೀಸರಿಗೆ ಟ್ವೀಟ್ ಮಾಡಿದ್ದಾರೆ.
ಸಿಗ್ನಲ್ ಜಂಪ್ ಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಫೈನ್ ಕಟ್ಟಬೇಕೆಂದು ಟ್ವಿಟರ್ನಲ್ಲಿ ಕೇಳಿಕೊಂಡಿದ್ದಾರೆ. ಇವರ ಪ್ರಾಮಾಣಿಕತೆ ಕಂಡ ಪೊಲೀಸರು, ಅಷ್ಟೇ ನಯವಾಗಿ ಉತ್ತರಿಸಿದ್ದಾರೆ. 'ಅರ್ಜೆಂಟ್ ಏನೂ ಇಲ್ಲಪ್ಪ, ನಾವು ನೊಟೀಸ್ ಕೊಟ್ಟ ಮೇಲೆ ಫೈನ್ ಕಟ್ಟು' ಎಂದು ಪೊಲೀಸರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಆದ್ರೆ ಬಾಲ ಕೃಷ್ಣ್ ಬಿರ್ಲಾನ ಅವರ ನಿಯಮ ಉಲ್ಲಂಘನೆ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ಯಾ ಇಲ್ವೋ?