ಈ ಶತಮಾನದ ಅತ್ಯಂತ ದುಬಾರಿ ಮದುವೆ; ಈ ಜೋಡಿಯ ಮದುವೆಗೆ ಖರ್ಚಾಗಿದ್ದು ಕೋಟಿ ಕೋಟಿ..

The Most Expensive Wedding Ceremony Of This Century Is Going Viral On Social Media
Published on

ನವದೆಹಲಿ: ಭಾರತದಲ್ಲಿ ಮದುವೆಯ ಸೀಸನ್ ನಡೆಯುತ್ತಿದೆ. ದೇಶಾದ್ಯಂತ ಕೆಲವು ಲಕ್ಷ ಜೋಡಿಗಳು ಒಂದಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಶ್ರೀಮಂತ ಕುಟುಂಬಗಳು ತಮ್ಮ ಮದುವೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದು ಸಾಮಾನ್ಯವಾಗಿದೆ. ಡೆಸ್ಟಿನೇಶನ್ ವೆಡ್ಡಿಂಗ್‌ಗಳೂ ಜೋರಾಗಿ ನಡೆಯುತ್ತಿವೆ. ದುಬಾರಿ ಮದುವೆ ಸಮಾರಂಭವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಶತಮಾನದಲ್ಲಿ ಇಷ್ಟೊಂದು ಶ್ರೀಮಂತ ವಿವಾಹ ಮಹೋತ್ಸವ ನಡೆದಿಲ್ಲ ಎನ್ನಲಾಗಿದೆ. ಇದು ಈ ಶತಮಾನದ ಅತ್ಯಂತ ದುಬಾರಿ ಮದುವೆ ಎನ್ನಲಾಗಿದೆ.

ಪ್ಯಾರಿಸ್ ನಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿದೆ. ಇದು ಈ ಶತಮಾನದ ಅತ್ಯಂತ ದುಬಾರಿ ವಿವಾಹ ಸಮಾರಂಭ ಎಂದು ಹೇಳಲಾಗುತ್ತದೆ. 26 ವರ್ಷ ವಯಸ್ಸಿನ ಮೆಡೆಲೀನ್ ಬ್ರಾಕ್ವೇ ಮತ್ತು ಜಾಕೋಬ್ ಲಾಗ್ರೋನ್ ನವೆಂಬರ್ 18 ರಂದು ವಿವಾಹವಾದರು. ಮೆಡೆಲೀನ್ ಬ್ರಾಕ್‌ವೇ ಅವರ ಕುಟುಂಬವು ಅತ್ಯಂತ ಶ್ರೀಮಂತ ಕುಟುಂಬದವರಾಗಿದ್ದಾರೆ. ಇವರು ಕಾರ್ ಡೀಲರ್‌ಶಿಪ್ ಅನ್ನು ನಡೆಸುತ್ತಾರೆ. ವಧು ಮೆಡೆಲೀನ್ ಬ್ರಾಕ್‌ವೇ ಅವರ ತಂದೆ ರಾಬರ್ಟ್ ಬ್ರಾಬಿಲ್ ಅವರು ಉಸ್ಸೆರಿ ಮೋಟಾರ್ಸ್‌ನ ಅಧ್ಯಕ್ಷರು ಮತ್ತು CEO ಆಗಿದ್ದಾರೆ. ಅವರ ಕಂಪನಿಯು ಕೋರಲ್ ಗೇಬಲ್ಸ್, ಕಟ್ಲರ್ ಬೇ ಮತ್ತು ಫ್ಲೋರಿಡಾದಲ್ಲಿ ಮರ್ಸಿಡಿಸ್-ಬೆನ್ಜ್ ಡೀಲರ್‌ಶಿಪ್ ಅನ್ನು ನಿರ್ವಹಿಸುತ್ತದೆ.

ಮೆಡೆಲೀನ್ ಬ್ರಾಕ್ವೇ ಮತ್ತು ಜಾಕೋಬ್ ಲಾಗ್ರೋನ್ ಪ್ರಸಿದ್ಧ ಅರಮನೆಯೊಂದರಲ್ಲಿ ವಿವಾಹವಾದರು. ಇಲ್ಲಿ ಒಂದು ರಾತ್ರಿಯ ಹೋಟೆಲ್ ತಂಗುವಿಕೆಯು ಸುಮಾರು ₹ 2,62,441. ಸಮಾರಂಭವು ಖಾಸಗಿ ಜೆಟ್‌ ಮತ್ತು ಅರಮನೆಯ ಒಳಗೆ ಮತ್ತು ಹೊರಗೆ ಬೃಹತ್ ಹೂವಿನ ಅಲಂಕಾರವು ಆಕರ್ಷಕವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿವಾಹ ಸಮಾರಂಭದ ವೆಚ್ಚದ ಬಗ್ಗೆ ನೆಟಿಜನ್‌ಗಳು ವಿಸ್ಮಯ ವ್ಯಕ್ತಪಡಿಸಿದ್ದಾರೆ.

ಭೋಜನ, ವರ್ಸೈಲ್ಸ್ ಅರಮನೆಯಲ್ಲಿ ರಾತ್ರಿಯ ತಂಗುವಿಕೆ, ಭರ್ಜರಿ ಊಟ, ಪಂಚತಾರಾ ಐಷಾರಾಮಿ ರೆಸಾರ್ಟ್‌ನಲ್ಲಿ  ಸಂಗೀತ ಕಾರ್ಯಕ್ರಮಗಳು ಎಲ್ಲವೂ ಆಚರಣೆಯ ಭಾಗವಾಗಿತ್ತು.

ಪ್ರಸ್ತುತ, ಮೆಡೆಲೀನ್ ಬ್ರಾಕ್‌ವೇ ಮತ್ತು ಜಾಕೋಬ್ ಲಾಗ್ರೋನ್ ಅವರ ವಿವಾಹ ಸಮಾರಂಭದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ವಿವಾಹ ಸಮಾರಂಭದ ವೆಚ್ಚ $59 ಮಿಲಿಯನ್ ಡಾಲರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು ರೂ.491 ಕೋಟಿ) ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net