

ಕೋಲಾರ: ಅಭಿವೃದ್ಧಿಯೇ ನನ್ನ ಗುರಿ, ಅದು ಬಿಟ್ಟು ಹಣ ಮಾಡಬೇಕು ಎಂಬ ಉದ್ದೇಶ ನನಗಿಲ್ಲ. ರೋಲ್‌ಕಾಲ್ ನನಗೆ ಗೊತ್ತಿಲ್ಲ, ಯಾರಾದರು ತಪ್ಪು ಮಾಡಿದರೆ ನಾನು ಸಹಿಸುವುದಿಲ್ಲ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಎಚ್ಚರಿಕೆ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಯಾರಾದರೂ ಪ್ರತಿಭಟನೆ ಮಾಡಿದರೇನೆ ನನ್ನ ಐಡೆಂಟಿಟಿ. ಅಂತಹುದಕ್ಕೆಲ್ಲ ನಾನು ಹೆದರುವುದಿಲ್ಲ ಎಂದರು.
ನಗರದಲ್ಲಿನ ಕಾಲೇಜುಗಳ ಅಭಿವೃದ್ಧಿಗಾಗಿ ಸರ್ಕಾರದಿಂದ 30 ಕೋಟಿ ರೂ. ತಂದಿದ್ದು, ಇದಕ್ಕೆ ಸಂಬಧಿಸಿದಂತೆ ಎಂಜಿನಿಯರ್ ತಂಡ ಭೇಟಿ ನೀಡಿದೆ. ನಾವು ಒಳ್ಳೆಯದು ಮಾಡುವುದು ತಪ್ಪಾ ಎಂದು ಪ್ರಶ್ನಿಸಿದರು.
ಮೂರು ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳಿರುವ ಕಾಲೇಜಿನಲ್ಲಿ ನೀರಿನ ಸಮಸ್ಯೆಯಿರುವುದನ್ನು ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕೈಯಿಂದ ಮೂರು ಲಕ್ಷ ರೂ. ಖರ್ಚು ಮಾಡಿ ನೀರಿನ ವ್ಯವಸ್ಥೆ ಮಾಡಿಕೊಡಲಾಗಿದೆ. ಅದಾಗಿಯೂ, ಸಚಿವರು ಬಂದಾಗ ಶೌಚಗೃಹಕ್ಕೆ ನೀರಿನ ಸಮಸ್ಯೆಯಿದೆ ಎಂದು ಹೇಳಿದರೆ ನಮಗೆ ಅವಮಾನ ಆಗುವುದಿಲ್ಲವೇ ಎಂದರು.
ತಿಂಗಳಿಗೊಂದು ಪ್ರತಿಭಟನೆ ಮಾಡಿ!
ಕಾಲೇಜು ವೀಕ್ಷಣೆ ಸಂದರ್ಭದಲ್ಲಿ ನಾನು ಬಳಸಿದ ಪದಕ್ಕೆ ಸಂಬಧಿಸಿದಂತೆ ಪ್ರತಿಭಟನೆ ನಡೆಯುತ್ತಿದೆ. 25 ವರ್ಷಗಳಿಂದ ನನ್ನ ವಿರುದ್ಧ ಹೋರಾಟ ಮಾಡಿದವರಿಂದಲೇ ನನಗೆ ಅನುಕೂಲವಾಗಿದೆ. ಚುನಾವಣೆ ಸಂದರ್ಭದಲ್ಲಿ ದಿನಕ್ಕೊಬ್ಬರು ನನ್ನ ವಿರುದ್ಧ ಹೇಳಿಕೆ ನೀಡಿದರು. ಆದರೆ, ನಾನು 33 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಆದ್ದರಿಂದ ನನ್ನ ವಿರುದ್ಧ ತಿಂಗಳಿಗೊಂದು ಪ್ರತಿಭಟನೆ ಮಾಡಲಿ ಎಂದು ಶಾಸಕರು ಹೇಳಿದರು.
ಯಾವುದೇ ನೋಟಿಸ್ ಬಂದಿಲ್ಲ
ನಗರಸಭೆ ಸದಸ್ಯ ಮುಬಾರಕ್ ಜಾತಿ-ಧರ್ಮಗಳನ್ನು ವಿಂಗಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ನಾವೆಂದು ಅಂತಹ ಕೆಲಸ ಮಾಡಿಲ್ಲ. ನನ್ನ ವಿರುದ್ಧ ಯಾವುದೇ ತನಿಖೆ ನಡೆಸಿದರೂ ಎಲ್ಲದಕ್ಕೂ ಸಿದ್ಧನಿದ್ದು, ಸಂದರ್ಭ ಬಂದಾಗ ಎಲ್ಲದಕ್ಕೂ ಉತ್ತರ ನೀಡುತ್ತೇನೆ. ಮಾನನಷ್ಟ ಮೊಕದ್ದಮೆ ನೋಟಿಸ್ ನನಗೆ ಬಂದಿಲ್ಲ ಎಂದು ಕೊತ್ತೂರು ಮಂಜುನಾಥ್ ಸ್ಪಷ್ಟಪಸಿದರು.
ಬಾಕ್ಸ್..