

ಬೆಂಗಳೂರು: ಸಣ್ಣ ವಯಸ್ಸು, ಸರಿಯಾದ ಶಿಕ್ಷಣ ಪಡೆದು ಉನ್ನತ ಹತಂಕೆ ಏರಬೇಕೆಂಬ ಗುರಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಇರಬೇಕು. ಬದಲಾಗಿ ಕಳ್ಳತನ ನಡೆಸಿ ರಿಮ್ಯಾಂಡ್ ಹೋಮ್ ಪಾಲಾಗಬಾರದು. ಅಪ್ರಾಪ್ತ ವಯಸ್ಕರ ದೃಷ್ಟಿ ಉತ್ತಮ ಶಿಕ್ಷಣದತ್ತ ಇರಬೇಕೇ ಹೊರತು ಸಮಾಜ ಘಾತುಕ ಕೆಲಸಗಳತ್ತ ಅಲ್ಲ. ಆದರೆ ಈಗ ಕಾಲ ಬದಲಾಗಿದೆ. ಸಣ್ಣ ಸಣ್ಣ ಮಕ್ಕಳು ಕೂಡ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ಅಪ್ರಾಪ್ತ ವಯಸ್ಸಿನ ಮಕ್ಕಳು ಮೊಬೈಲ್ ಕದಿಯಲು ಯತ್ನಿಸಿ ಪರಾರಿಯಾಗಿದ್ದಾರೆ.
ನಿನ್ನೆ(ಜ.14) ಸಂಜೆ 5 ಗಂಟೆಯ ಸುಮಾರಿಗೆ ಮೂರು ಜನ ಅಪ್ರಾಪ್ತ ಬಾಲಕರು ಇನ್ನೋರ್ವ ಬಾಲಕನ ಕೈಯ್ಯಲ್ಲಿದ್ದ ಮೊಬೈಲನ್ನು ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. ಬಾಲಕ ಕಳ್ಳತನ ನಡೆಸಿ ಪರಾರಿಯಾಗಲು ಯತ್ನಿಸಿದ ಬಾಲಕರನ್ನು ಬೆನ್ನಟ್ಟುತ್ತಿರುವ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಪ್ರಾಪ್ತ ಮಕ್ಕಳು ಮೊಬೈಲ್ ಕದಿಯಲು ಹೋಗಿ ವಿಫಲ ಯತ್ನ ನಡೆಸಿರುವ ಘಟನೆ, ಕೆಂಗೇರಿಯ ಸ್ಯಾಟ್ಲೈಟ್ ಟೌನ್ನಲ್ಲಿ ನಡೆದಿದೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.