

ಮುಂಬೈ/ಕ್ಯಾಲಿಫೋರ್ನಿಯಾ: ರಿಲಯನ್ಸ್ ಮತ್ತು ಡಿಸ್ನಿ ನಡುವಿನ ಮನರಂಜನಾ ಬ್ರ್ಯಾಂಡ್ಗಳ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ವಯಾಕಾಮ್ 18 ಮೀಡಿಯಾ ಪ್ರೖೆವೇಟ್ ಲಿಮಿಟೆಡ್ ಹಾಗೂ ದಿ ವಾಲ್ಟ್ ಡಿಸ್ನಿ ಕಂಪನಿ ವಿಲೀನದ ನಂತರ ಈಗ ಹೊಸ ಜಂಟಿ ಉದ್ಯಮ ದೇಶದ ಅತಿದೊಡ್ಡ ಮಾಧ್ಯಮ ಕಂಪನಿಯಾಗಿದ್ದು, 100 ಟಿವಿ ವಾಹಿನಿಗಳನ್ನು ನಿರ್ವಹಿಸಲಿದೆ. ಜಂಟಿ ಉದ್ಯಮದ ಒಟ್ಟು ಮೌಲ್ಯ 70,352 ಕೋಟಿ ರೂ. ಆಗಿದೆ. ಇದರಲ್ಲಿ ರಿಲಯನ್ಸ್ 11,500 ಕೋಟಿ ರೂ. ಹೂಡಿಕೆ ಮಾಡಿದೆ. ಈ ಜಂಟಿ ಉದ್ಯಮದ ಮೇಲೆ ರಿಲಯನ್ಸ್ ನಿಯಂತ್ರಣವನ್ನು ಹೊಂದಿರುತ್ತದೆ. ನೀತಾ ಅಂಬಾನಿ ಜಂಟಿ ಉದ್ಯಮದ ಅಧ್ಯಕ್ಷೆಯಾಗಿದ್ದಾರೆ. ಸ್ಟಾರ್ ಇಂಡಿಯಾದ ಮಾಜಿ ಮುಖ್ಯಸ್ಥ ಉದಯ್ ಶಂಕರ್ ಅವರನ್ನು ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ.
ಈ ಜಂಟಿ ಉದ್ಯಮವು 100 ಟಿವಿ ವಾಹಿನಿಗಳನ್ನು ನಿರ್ವಹಿಸುತ್ತದೆ ಮತ್ತು ವಾರ್ಷಿಕವಾಗಿ 30,000+ ಗಂಟೆಗಳ ಟಿವಿ ಮನರಂಜನೆಯ ಕಂಟೆಂಟ್ ಉತ್ಪಾದಿಸುತ್ತದೆ. ಟಿವಿ ವಾಹಿನಿಗಳಾದ ಸ್ಟಾರ್ ಮತ್ತು ಕಲರ್ಸ್ ಅಲ್ಲದೆ, ಜಿಯೋ ಸಿನಿಮಾ ಮತ್ತು ಹಾಟ್ ಸ್ಟಾರ್ ಡಿಜಿಟಲ್ ಪ್ಲಾಟ್ಫಾಮರ್್ಗಳು ಇದರ ಅಡಿಯಲ್ಲಿವೆ. ಈ ಒಟಿಟಿ ತಾಣಗಳು ಒಟ್ಟು 5 ಕೋಟಿಗಳಿಗಿಂತ ಹೆಚ್ಚು ಚಂದಾದಾರರನ್ನು ಹೊಂದಿವೆ. ಈ ಜಂಟಿ ಉದ್ಯಮವು ಕ್ರಿಕೆಟ್, ಫುಟ್ಬಾಲ್ ಮೊದಲಾದ ಕ್ರೀಡೆಗಳ ಹಕ್ಕುಸ್ವಾಮ್ಯವನ್ನು ಸಹ ಹೊಂದಿದೆ. ‘ಭಾರತದಲ್ಲಿ ಮಾಧ್ಯಮ ಮತ್ತು ಮನರಂಜನಾ ಉದ್ಯಮವನ್ನು ಪರಿವರ್ತಿಸುವ ಈ ಪ್ರಯಾಣದಲ್ಲಿ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ’ ಎಂದು ಬೋಧಿ ಟ್ರೀ ಸಿಸ್ಟಮ್ಸ್ನ ಸಹ-ಸಂಸ್ಥಾಪಕ ಉದಯ್ ಶಂಕರ್ ಹೇಳಿದ್ದಾರೆ.
ಈ ಜಂಟಿ ಉದ್ಯಮದ ಮೂಲಕ ಭಾರತೀಯ ಮಾಧ್ಯಮ ಮತ್ತು ಮನ ರಂಜನಾ ಉದ್ಯಮವು ಪರಿವರ್ತನೆಯ ಯುಗವನ್ನು ಪ್ರವೇಶಿ ಸುತ್ತಿದೆ. ಡಿಸ್ನಿಯೊಂದಿಗಿನ ನಮ್ಮ ಸಂಬಂಧದ ಜೊತೆಗೆ, ನಮ್ಮ ಗಹನವಾದ ಸೃಜನಶೀಲ ಪರಿಣತಿ ಮತ್ತು ಭಾರತೀಯ ಗ್ರಾಹಕರ ಬಗ್ಗೆ ನಮ್ಮ ಸಾಟಿಯಿಲ್ಲದ ತಿಳಿವಳಿಕೆ ಭಾರತೀಯ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ಕಂಟೆಂಟ್ ಖಚಿತಪಡಿಸುತ್ತದೆ. | ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ https://www.vijayavani.net/this-buffalo-maintains-healthy-diet