ಪ್ರಿಯತಮೆಗಾಗಿ 'ಆಪರೇಷನ್​​ ಸಿಂಧೂರ' ಮಾಹಿತಿ ಪಾಕ್​ಗೆ ಮಾರಿದ ವ್ಯಕ್ತಿ..! | Operation Sindoor

dk - 2025-06-26T182844.311
Published on

Operation Sindoor: ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಪಾಕ್​ 'ಗೂಢಚಾರ್ಯರು'ಗಳನ್ನು ಮಟ್ಟ ಹಾಕಿದ್ದ ಎನ್​ಐಎ ತಂಡ ಇದೀಗ ತನ್ನ ಪ್ರಿಯತಮೆಗೊಸ್ಕರ ಆಪರೇಷನ್​​ ಸಿಂಧೂರ ವಿವರಗಳನ್ನು ಪಾಕಿಸ್ತಾನಕ್ಕೆ ಮಾರಿದ ಆರೋಪ ಮೇಲೆ ಮತ್ತೊಬ್ಬ ಪಾಕ್​ ಪರ ಗೂಢಚಾರಿಕೆ ನಡೆಸುತ್ತಿದ್ದರವನ್ನು ಗುರುವಾರ ಬಂಧಿಸಲಾಗಿದೆ.

ದೆಹಲಿಯ ಡಾಕ್‌ಯಾರ್ಡ್‌ನ ನೌಕಾಪಡೆಯ ನಿರ್ದೇಶಕರಲ್ಲಿ ಅಪ್ಪರ್ ಡಿವಿಷನ್ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದ ವಿಶಾಲ್ ಯಾದವ್ ಎಂಬ ವ್ಯಕ್ತಿ ಆಪರೇಷನ್ ಸಿಂಧೂರ್ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿಯನ್ನು ರವಾನಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಪ್ರಸ್ತುತ ಪೊಲೀಸ್​ ವಶದಲ್ಲಿರುವ ಆರೋಪಿ ವಿಶಾಲ್ ಯಾದವ್ ತನ್ನ ಗೆಳತಿಯ ಪ್ರೀತಿಗಾಗಿ ಈ ಕೆಲಸ ಮಾಡಿದ್ದಾನೆ ಎಂಬ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಸಾಮಾಜಿಕ ಮಾಧ್ಯಮದ ಮೂಲಕ ವಿಶಾಲ್ ಅವರನ್ನು ಮೆಚ್ಚಿಸಿದ ಹುಡುಗಿ. ತಾನು ಭಾರತೀಯ ಹುಡುಗಿ ಎಂದು ಹೇಳುವ ಮೂಲಕ ಅವಳು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಇತನನ್ನು ಮೋಸಗೊಳಿಸಿದ್ದಾಳೆ.

ಈಕೆಯ ಮೋಹದಲ್ಲಿ ಬಿದ್ದ ಯಾದವ್​ ಭಾರತ ಕೈಗೊಂಡ ವಿವಿಧ ಕಾರ್ಯಾಚರಣೆಗಳ ಮಾಹಿತಿಯನ್ನು ಕದ್ದು ಆಕೆಗೆ ರವಾನಿಸಿದ್ದಾನೆ. ಮೊದಲು, ವಿಶಾಲ್ ಅವನಿಗೆ ತಿಳಿಯದೆ ಭಾರತೀಯ ರಕ್ಷಣಾ ವ್ಯವಹಾರಗಳ ಬಗ್ಗೆ ಸಣ್ಣ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳುಹಿಸಿದನು. ನಂತರ ಅವನು ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಬಗ್ಗೆಯೂ ಮಾಹಿತಿಯನ್ನು ಮಾರಾಟ ಮಾಡಿದ್ದಾನೆ ಎಂಬ ಆರೋಪ ಇತನ ಮೇಲಿದೆ.

ಪೊಲೀಸರು ಹೇಳಿದ್ದೇನು..?

ಸಿಐಡಿ ಭದ್ರತಾ ವಿಭಾಗದ ಇನ್ಸ್‌ಪೆಕ್ಟರ್ ವಿಷ್ಣು ಕಾಂತ್ ಗುಪ್ತಾ ನೀಡಿದ ವಿವರಗಳ ಪ್ರಕಾರ, ವಿಶಾಲ್ ಪಾಕಿಸ್ತಾನಕ್ಕೆ ಮಾಹಿತಿಯನ್ನು ರವಾನಿಸಲು 2 ಲಕ್ಷ ರೂ.ವರೆಗೆ ಪಡೆದಿರುವುದು ಕಂಡುಬಂದಿದೆ. ಇದರಲ್ಲಿ, ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿಗಾಗಿ ಪ್ರತ್ಯೇಕವಾಗಿ 50 ಸಾವಿರ ರೂ.ಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಪ್ರಾಥಮಿಕ ತನಿಖೆಯಲ್ಲಿ ಮಾಹಿತಿಯನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net