

ಬೆಂಗಳೂರು: ವಚನ ಪಿತಾಮಹ ಡಾ. ಫಕೀರಪ್ಪ ಗುರುಸಿದ್ದಪ್ಪ ಹಳಕಟ್ಟಿಯವರ ಜನ್ಮದಿನಾಚರಣೆಯನ್ನು ಬೆಂಗಳೂರಿನ ವಚನ ಪಿತಾಮಹ ಡಾ. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಆಚರಣೆ ಮಾಡಲಾಯಿತ್ತು.
ಪರಮಪೂಜ್ಯ ಹಳಕಟ್ಟಿ ಅವರ ಭಾವಚಿತ್ರಕ್ಕೆ ಬಿ ಎಲ್ ಡಿ ಸಂಸ್ಥೆ ನಿರ್ದೇಶಕ ಶ್ರೀ ಬಸನಗೌಡ ಎಂ.ಪಾಟೀಲ್ ಪುಷ್ಪ ನಮನ ಸಲ್ಲಿಸಿದರು, ಕಾರ್ಯಕ್ರಮದಲ್ಲಿ ಡಾ ಮಹಾಂತೇಶ್ ಬಿರಾದಾರ್, ಬೆಂಗಳೂರು ಕೇಂದ್ರದ ನಿರ್ದೇಶಕ ಶ್ರೀ ಅಶೋಕ್ ದೊಮ್ಮಲೂರು, ಶಿವಾನಂದಾ ಬಸವಂತಪ್ಪ ಶ್ರೀ ಹೆಚ್.ಸಿ. ಉಮೇಶ್, ಶ್ರೀ ಪಿ. ಎನ್. ರುದ್ರಪ್ಪ, ಶ್ರೀ ಹರೀಶ್ ಇತರರು ಭಾಗವಹಿಸಿದರು.