ಮಹನೀಯರ ಜೀವನ ಸಮಾಜಕ್ಕೆ ಆದರ್ಶ

ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ತಹಸೀಲ್ದಾರ್ ಜೆ.ಮಂಜುನಾಥ್, ಜಯರಾಂ, ರವಿ ಚಿಲ್ಕುಂದ, ರಮೇಶ್, ಗೌರೀಶ್, ರಘು, ರವಿ ಇದ್ದರು.
ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ತಹಸೀಲ್ದಾರ್ ಜೆ.ಮಂಜುನಾಥ್, ಜಯರಾಂ, ರವಿ ಚಿಲ್ಕುಂದ, ರಮೇಶ್, ಗೌರೀಶ್, ರಘು, ರವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • * ತಹಸೀಲ್ದಾರ್ ಜೆ.ಮಂಜುನಾಥ್ ಅಭಿಪ್ರಾಯ
ಹುಣಸೂರು : ನಾಡಿನ ಸಾಮಾಜಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರು ಸಮಾಜ ಹಾಗೂ ಜನರಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು ಎಂದು ತಹಸೀಲ್ದಾರ್ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸವಿತಾ ಮಹರ್ಷಿ ಮತ್ತು ಮಡಿವಾಳ ಮಾಚಿದೇವ ಜಯಂತ್ಯತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಡೀ ಸಮುದಾಯಕ್ಕೆ ಮಹನೀಯರು ತಮ್ಮ ಜೀವನಾದರ್ಶಗಳ ಮೂಲಕ ಸಂದೇಶವನ್ನು ಬಿಟ್ಟುಹೋಗಿದ್ದಾರೆ. ಮಡಿವಾಳ ಮಾಚಿದೇವ ಮತ್ತು ಸವಿತಾ ಮಹರ್ಷಿ ಇಬ್ಬರೂ ಸೂಕ್ಷ್ಮಾತಿಸೂಕ್ಷ್ಮ ಸಮುದಾಯದಿಂದ ಬಂದವರಾದರೂ ಸಮಾಜದಲ್ಲಿ ಅತಿ ಅಗತ್ಯ ಸೇವೆಗಳನ್ನು ನೀಡುತ್ತಲೇ ಬದುಕಿನ ಮೌಲ್ಯಗಳನ್ನು ತಿಳಿಸಿದರು. ಆಯಷ್ಕರ್ಮ ಕಾರ್ಯ ತಿಳಿಸಿದ ಸವಿತಾ ಮಹರ್ಷಿ ಜನಮಾನಸದಲ್ಲಿ ಗೌರವ ಸಂಪಾದಿಸಿದರೆ, ಕಲ್ಯಾಣಕ್ರಾಂತಿಯ ನಂತರ ಕನ್ನಡ ಸಾರಸ್ವತ ಲೋಕದ ಅದ್ಭುತ ಸಂಪತ್ತಾಗಿರುವ ವಚನ ಸಾಹಿತ್ಯವನ್ನು ಮಡಿವಾಳ ಮಾಚಿದೇವ ರಕ್ಷಿಸಿದ್ದಲ್ಲದೆ, ವಚನಗಳನ್ನೂ ರಚಿಸಿ ಸಮಾಜಕ್ಕೆ ಸಂದೇಶ ನೀಡಿದರು ಎಂದರು.
ಸಮಿತಿ ಸದಸ್ಯ ಎಸ್.ಜಯರಾಂ ಮಾತನಾಡಿ, ಸವಿತಾ ಮಹರ್ಷಿ ಮತ್ತು ಮಡಿವಾಳ ಮಾಚೀದೇವ ಇಬ್ಬರೂ ಪರಶುರಾಮನ ಅಂಶದಿಂದಲೇ ಜನಿಸಿದವರು. ಆಯುಷ್ಕರ್ಮ, ಆಯುರ್ವೇದ ಮತ್ತು ಸಂಗೀತಗಳ ಮೂಲಕ ನಾಡಿಗೆ ಕೊಡುಗೆ ನೀಡಿದ ಸವಿತಾ ಮಹರ್ಷಿ ಮತ್ತು ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ನೀಡಿದ ಮಡಿವಾಳ ಮಾಚೀದೇವ, ಆಕೆಯ ಮಗಳು ಗಾಯತ್ರಿದೇವಿಯಿಂದಾಗಿ ರೂಪುಗೊಂಡ ಗಾಯತ್ರಿಮಂತ್ರ ಎಲ್ಲವೂ ಇಂದಿಗೂ ಸಮಾಜಕ್ಕೆ ದಾರಿದೀಪಗಳಾಗಿವೆ ಎಂದರು. 
ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ರವಿ ಚಿಲ್ಕುಂದ, ಕಾರ್ಯದರ್ಶಿ ನಾಗಪ್ಪಶೆಟ್ಟಿ, ಸವಿತಾ ಸಮಾಜದ ಅಧ್ಯಕ್ಷ ಗೌರೀಶ ಮಾತನಾಡಿದರು. ಮುಖಂಡರಾದ ಪಾಪಣ್ಣ, ರಘು, ನಾಗಣ್ಣ,ರವಿ, ರಮೇಶ್, ಬಾಬು, ಮಹದೇವ್, ರಾಜು, ಹೊನ್ನಪ್ಪ, ಖಾಲಿದ್, ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ಗಜೇಂದ್ರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೆ.ಹೊಂಗಯ್ಯ, ಶಿರಸ್ತೇದಾರ್ ಶ್ರೀ ಪಾದ್ ನಲವತ್‌ವಾಡಕರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ಸಮಾಜ ಕಲ್ಯಾಣಾಧಿಕಾರಿ ಭರತ್‌ಕುಮಾರ್, ಪಿ.ಆರ್.ರಾಚಪ್ಪಇತರರು ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net