

ಪ್ಲಾಸ್ಟಿಕ್ ಸಮಸ್ಯೆಯ ಕುರಿತು ಜಗತ್ತಿನೆಲ್ಲೆಡೆ ವಿವಿಧ ಹಂತಗಳಲ್ಲಿ ಜನಜಾಗೃತಿ ಅಭಿಯಾನ ನಡೆಯುತ್ತಿದೆ. ಸೌದಿ ಅರೇಬಿಯದ ವಿದ್ಯಾರ್ಥಿಗಳು ಪ್ಲಾಸ್ಟಿಕ್ ತ್ಯಾಜ್ಯದಿಂದ ರಚಿಸಿದ ಕಲಾಕೃತಿಯೊಂದು ಗಿನ್ನೆಸ್ ಪುಟದಲ್ಲಿ ಸೇರ್ಪಡೆಯಾಗಿದೆ.
ಸೌದಿ ಅರೇಬಿಯದ ಬ್ರಿಟಿಷ್ ಇಂಟರ್ನ್ಯಾಷನಲ್ ಸ್ಕೂಲ್ ಆಫ್ ಜೆಡ್ಡಾ ಶಾಲೆಯ ಮಕ್ಕಳು 3,23,103 ಪ್ಲಾಸ್ಟಿಕ್ ಬಾಟಲಿಯ ಮುಚ್ಚಳಗಳನ್ನು ಬಳಸಿಕೊಂಡು 8,984.6 ಅಡಿ ಉದ್ದದ ಸರಪಳಿಯನ್ನು ನಿರ್ವಿುಸಿ ಗಿನ್ನೆಸ್ ದಾಖಲೆಯನ್ನು ಸೃಷ್ಟಿಸಿದ್ದಾರೆ. ಇದಕ್ಕಾಗಿ ಸಂಗ್ರಹಿಸಲಾಗಿರá-ವ ಪ್ಲಾಸ್ಟಿಕ್ ಬಾಟಲಿ ಮತ್ತು ಮುಚ್ಚಳಗಳನ್ನು ಮರುಬಳಕೆ ಕೇಂದ್ರಕ್ಕೆ ಕಳಿಸಲಾಗುತ್ತದೆ. ಈ ಹಿಂದೆ ನೆದರ್ಲೆಂಡ್ನಲ್ಲಿ 2,60,866 ಮುಚ್ಚಳಗಳಿಂದ ಸರಪಳಿಯನ್ನು ರಚಿಸಲಾಗಿತ್ತು.