ಒಂದು ಮುತ್ತಿನಿಂದ ಮದುವೆಗೇ ಬಿತ್ತು ಕುತ್ತು!

marriage
Published on

ಸಂಭಾಲ್ (ಉತ್ತರ ಪ್ರದೇಶ): ಮದುವೆ ಮಂಟಪದಲ್ಲೇ ವಧು ವಿವಾಹವನ್ನೇ ತಿರಸ್ಕರಿಸಿದ ಘಟನೆಯೊಂದು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಿಂದ ವರದಿಯಾಗಿದೆ. ಪರಸ್ಪರ ಮಾಲೆಗಳನ್ನು ವಿನಿಮಯ ಮಾಡಿಕೊಂಡ ನಂತರ ವಧುವಿಗೆ ವರ ವೇದಿಕೆಯಲ್ಲೇ ಮುತ್ತು ನೀಡಿದ ಎನ್ನುವುದೇ ಇದಕ್ಕೆ ಕಾರಣ. ಭಾವಿ ಪತಿಯ ವರ್ತನೆಯಿಂದ ಬೇಸತ್ತು ವರಾತ ತೆಗೆದ ವಧು ಈ ಮದುವೆ ಬೇಡವೇ ಬೇಡ ಎಂದು ವಿವಾಹ ಸಮಾರಂಭವನ್ನು ರದ್ದಾಗುವಂತೆ ಮಾಡಿದಳು. ಗೆಳೆಯರೊಂದಿಗೆ ಪಂದ್ಯ ಕಟ್ಟಿ ಭಾವಿ ಪತ್ನಿಗೆ ಕಿಸ್ ಮಾಡಿದ ವ್ಯಕ್ತಿ ಇದೀಗ ಪಶ್ಚಾತ್ತಾಪದಿಂದ ಪರಿತಪಿಸುತ್ತಿರಬಹುದು. ಗೆಳೆಯರ ಮಾತು ಕೇಳಿ ಹೀಗೆ ಮಾಡಿದ ಆತನ ಗುಣದ ಬಗ್ಗೆಯೇ 23 ವರ್ಷದ ಯುವತಿ ಅನುಮಾನ ವ್ಯಕ್ತಪಡಿಸಿದ್ದಾಳೆ. ಮದುವೆ ರದ್ದಾಗಿದ್ದರಿಂದ ಚಿಂತಿತರಾಗಿರುವ ಎರಡೂ ಕುಟುಂಬಗಳು ಸ್ವಲ್ಪ ದಿನ ಕಾದು ನೋಡಲು ನಿರ್ಧರಿಸಿದ್ದಾರೆ. ಯುವತಿಯ ಸಿಟ್ಟು ಇಳಿಯಬಹುದೆಂಬ ಆಶಯ ಅವರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net