ಹಳೇ ದ್ವೇಷಕ್ಕೆ 23 ಪಾರಿವಾಳಗಳ ಕುತ್ತಿಗೆ ಕಟ್ ಮಾಡಿ ಸಾಯಿಸಿದ ಕಿಡಗೇಡಿಗಳು!

hubbali pari
Published on

ಹುಬ್ಬಳ್ಳಿ: ಕುತ್ತಿಗೆ ಕಟ್ ಮಾಡಿ 23 ಪಾರಿವಾಳಗಳನ್ನು ಕಿಡಗೇಡಿಗಳು ಸಾಯಿಸಿರುವ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರೋ ಯಾವಗಲ್ ಪ್ಲಾಟ್​​ನಲ್ಲಿ ನಡೆದಿದೆ.

ರಾಹುಲ್ ದಾಂಡೇಲಿ ಅವರು ಕಳೆದ ಆರು ತಿಂಗಳಿಂದ 23 ಪಾರಿವಾಳನ್ನು ಸಾಕಿದ್ದರು. ಮನೆಯಲ್ಲಿ ಸಾಕಿದ 23 ಪಾರಿವಾಳಗಳನ್ನ ಕಿರಾತಕರು ಕೊಂದು ಪರಾರಿಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾಹುಲ್ ದಾಂಡೇಲಿ ಅವರಿಗೆ ಸೇರಿದ 23 ಪಾರಿವಾಳಗಳನ್ನು ಕಿರಾತಕರು ಚಾಕುವಿನಿಂದ ಕುತ್ತಿಗೆ ಕಟ್ ಮಾಡಿ ಸಾಯಿಸಿ ಪರಾರಿಯಾಗಿದ್ದಾರೆ. ಹಳೇ ದ್ವೇಷದ ಹಿನ್ನಲೆ ಪಾರಿವಾಳ ಕೊಲೆ ಮಾಡಿರೋ ಶಂಕೆ ವ್ಯಕ್ಯವಾಗಿದೆ.

ಪ್ರೀತಿಯಿಂದ ಸಾಕಿದ ಪಾರಿವಾಳಗಳನ್ನು ಕಳೆದುಕೊಂಡ ರಾಹುಲ್ ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಾರಿವಾಳ ಸಾಯಿಸಿದವರನ್ನ ಕೂಡಲೇ ಬಂಧನ ಮಾಡಬೇಕೆಂದು ಆಗ್ರಹಿಸಿ ದೂರು ದಾಖಲಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net