

ಬೆಂಗಳೂರು: ಶೀಲ ಶಂಕಿಸಿ ಪತ್ನಿ ಹತ್ಯೆ ಪ್ರಕರಣ ಸಂಬಂಧ ಚಂದ್ರಾ ಲೇಔಟ್ ಠಾಣೆ ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.
ಗಂಗೊಂಡನಹಳ್ಳಿ ನಿವಾಸಿ ಇಮ್ರಾನ್ ಖಾನ್ (38) ಬಂಧಿತ. ಗಂಗೊಂಡನಹಳ್ಳಿ 3ನೇ ಮುಖ್ಯರಸ್ತೆಯಲ್ಲಿನ ಮನೆಯಲ್ಲಿ ತನ್ನ ಪತ್ನಿ ಗೌಸಿಯಾ ಬಿ. (31) ಎಂಬಾಕೆಯ ಶೀಲ ಶಂಕಿಸಿ ನ. 22ರ ರಾತ್ರಿ ಕೊಲೆ ಮಾಡಿ, ಮಗನ ಜತೆ ಪರಾರಿಯಾಗಿದ್ದ. 24ರ ರಾತ್ರಿ ಗೌಸಿಯಾಗೆ ಸಹೋದರ ೆನ್ ಮಾಡಿದಾಗ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ ಮನೆ ಬಳಿಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಚಂದ್ರಾ ಲೇಔಟ್ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.