

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಸಮೀಪದ ಶ್ರೀಕಂಠೇಶ್ವರದ ಮನೆಯಲ್ಲಿ ಇತ್ತೀಚೆಗೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪತಿಯೇ ಸುಪಾರಿ ಕೊಟ್ಟು ಪತ್ನಿಯನ್ನು ಹತ್ಯೆ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶ್ರೀಕಂಠೇಶ್ವರ ನಗರದ ನಿವಾಸಿ ಪುಷ್ಪಲತಾ ಕೊಲೆಗೈದ ಆರೋಪದ ಹಿನ್ನೆಲೆಯಲ್ಲಿ ಪತಿ ಶಿವಶಂಕರ್ ಹಾಗೂ ಆತನ ಸ್ನೇಹಿತ ವಿನಯ್‌ನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪತ್ನಿ ಪುಷ್ಪಲತಾ ಅವರ ಶೀಲ ಶಂಕಿಸಿ ಪತಿ ಶಿವಶಂಕರ್ ಆಗಾಗ್ಗೆ ಜಗಳವಾಡುತ್ತಿದ್ದನು. ಆಕೆಯನ್ನು ಕೊಲೆ ಮಾಡಲು ಸ್ನೇಹಿತ ವಿನಯ್‌ಗೆ ಸುಾರಿ ಕೊಟ್ಟಿದ್ದನು. ೆ. ೫ ರಂದು ಪುಷ್ಪಲತಾ ಅವರು ಮನೆಯಲ್ಲಿ ಒಬ್ಬರೇ ಇದ್ದಾಗ ವಿನಯ್ ಹೋಗಿ ಅವರ ಮನೆಯಲ್ಲಿದ್ದ ಸಿಸಿ ಕ್ಯಾಮರಾ ಆ್ ಮಾಡಿ ಪುಷ್ಪಲತಾ ಅವರ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ಕಿಟಕಿಗೆ ಹಗ್ಗದಿಂದ ನೇಣು ಬಿಗಿದುಕೊಂಡಂತೆ ಬಿಂಬಿಸಿ ಪರಾರಿಯಾಗಿದ್ದನು. ಸುದ್ದಿ ತಿಳಿದು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾಗ ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂಬುದು ಕಂಡು ಬಂದಿತ್ತು. ನಂತರ ಮರಣೋತ್ತರ ವರದಿಯಲ್ಲಿ ಕೊಲೆ ಎಂಬುದು ಕಂಡುಬಂದಿತ್ತು.
೨೦೦ ಸಿಸಿ ಕ್ಯಾಮರಾ ದೃಶ್ಯ ಪರಿಶೀಲಿಸಿ ಸೆರೆ:
ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ೨೦೦ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿ ವಿನಯ್ ಬಂಧನ ಮಾಡಿದ್ದಾರೆ. ಜತೆಗೆ ಪುಷ್ಪಲತಾ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬ್ಯಾಂಕ್‌ವೊಂದರಲ್ಲಿ ವಿನಯ್ ಐದು ವರ್ಷಗಳ ಹಿಂದೆ ಶಿವಶಂಕರ್‌ಗೆ ಪರಿಚಯವಾಗಿದ್ದ. ಕಳೆದ ಮೂರು ವರ್ಷಗಳಿಂದ ತನ್ನ ಪತ್ನಿಯನ್ನು ಕೊಲೆ ಮಾಡಬೇಕು ಎಂದು ಪತಿ ಶಿವಶಂಕರ್ ಒಡಾಡುತ್ತಿದ್ದ ಆದರೆ ಧೈರ್ಯ ಸಾಕಾಗದೆ ಸುಮ್ಮನಾಗಿದ್ದ. ಆದರೆ ಅಂತಿಮವಾಗಿ ಸ್ನೇಹಿತ ವಿನಯ್‌ಗೆ ಸುಾರಿ ಕೊಟ್ಟು ಕೊಲೆ ಮಾಡಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ:
ಇನ್ನು ಆರೋಪಿ ವಿನಯ್ ವಿಚಾರಣೆ ವೇಳೆ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ತುರುವೇಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಹುಣಸೇಮಾರನಹಳ್ಳಿ ೨೦೨೩ ರಲ್ಲಿ ವಿನಯ್ ಪತ್ನಿ ಕೆರೆಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದರು ಎಂದು ಹೇಳಲಾಗಿತ್ತು. ಆದರೆ ಪೊಲೀಸರ ವಿಚಾರಣೆ ವೇಳೆ ತಾನೇ ಪತ್ನಿಯನ್ನು ಕೆರೆಗೆ ತಳ್ಳಿ ಕೊಂದಿರುವುದಾಗಿ ಆರೋಪಿ ವಿನಯ್ ಒಪ್ಪಿಕೊಂಡಿದ್ದಾನೆ. ಈ ಪ್ರಕರಣದ ಹೆಚ್ಚಿನ ತನಿಖೆಯನ್ನು ತುರುವೇಕೆರೆ ಪೊಲೀಸರು ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.