ಅಕ್ರಮ ಸಂಬಂಧ; ಪ್ರೀತಿಸಿ ಮದುವೆಯಾದವಳನ್ನೇ ಕೊಚ್ಚಿ ಕೊಲೆಗೈದ ಪತಿ

chikballapura crime
Published on

ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳ, ಹೆಂಡತಿಯ ಅಕ್ರಮ ಸಂಬಂಧ ಹಿನ್ನಲೆಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಗಂಡನೇ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಚಿಂತಾಮಣಿ‌ ತಾಲೂಕು ಮುರಗಮಲ್ಲದ ಎಂ.ಗೊಲ್ಲಪಲ್ಲಿ ಗ್ರಾ.ಪಂ ವ್ಯಾಪ್ತಿಯ ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ವಿನೋದಮ್ಮ ಮೃತ ಮಹಿಳೆ. ಈಕೆ ಪತಿ ಕೆಎಸ್ ಸುರೇಶ್ ಕೊಲೆ ಆರೋಪಿಯಾಗಿದ್ದಾನೆ. ಚಿಂತಾಮಣಿ ತಾಲೂಕು ಕೊಂಡ್ಲಿಗಾನಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ಕುರುಬ ಜನಾಂಗಕ್ಕೆ ಸೇರಿದ ಕೆ.ಎಸ್ ಸುರೇಶ್, ಆದೇ ಗ್ರಾಮದ ಗೊಲ್ಲ ಸಮುದಾಯಕ್ಕೆ ಸೇರಿದ ವಿನೋದಮ್ಮ ಎಂಬ ಮಹಿಳೆಯನ್ನು ಕಳೆದ 16 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಇವರಿಗೆ 14 ವರ್ಷದ ಹೆಣ್ಣು ಮಗಳು‌ ಕೂಡ ಇದ್ದಾಳೆ.

ಹತ್ತು ವರ್ಷಗಳಿಂದ ಸುಖವಾಗಿದ್ದ ಇವರು. ಇತ್ತೀಚೆಗೆ‌ ಸುರೇಶ್ ಹೆಂಡತಿಗೆ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪಿಡಿಸುತ್ತಿದ್ದನು ಎಂಬ ಆರೋಪನ್ನು ವಿನೋದಮ್ಮಳ ಪೋಷಕರಿಂದ ಕೇಳಿ ಬರುತ್ತಿದೆ. ಹೆಂಡತಿ ಬೇರೆಯವರೊಂದಿಗೆ ಆಕ್ರಮ ಸಂಬಂಧ ಹೊಂದಿದ್ದಳು ಎಂಬ ಅನುಮಾನದ ಮೇಲೆ ವಿನೋದಮ್ಮಳನ್ನು ಮಚ್ಚಿನಿಂದ ಕುತ್ತಿಗೆ ಸೀಳಿ ಕೊಚ್ಚಿ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಸುರೇಶ್ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಂತಾಮಣಿ ಉಪ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ, ಕೆಂಚಾರ್ಲಹಳ್ಳಿ ವೃತ್ತದ ಆರಕ್ಷಕ ವೃತ್ತ ನಿರೀಕ್ಷಕ ಪುರುಷೋತ್ತಮ್, ಬಟ್ಲಹಳ್ಳಿ ಪಿಎಸ್ಐ ಪುನೀತ್ ಹಾಗೂ ಬಟ್ಲಹಳ್ಳಿ ಪೊಲಿಸರು ಭೇಟಿ ನೀಡಿ ಸ್ಥಳ ಪರೀಶಿಲನೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net