ಪ್ರೀತಿಸಿ ಎರಡನೇ ಮದುವೆಯಾದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪತಿ

Wife
Published on

ಹುಬ್ಬಳ್ಳಿ: ಇಲ್ಲೋರ್ವ ಪಾಪಿ ಪತಿ, ತನ್ನ ಮನೆಯವರೊಂದಿಗೆ ಸೇರಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದ ಮಹಿಳೆಯನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಅಷ್ಟೇ ಅಲ್ಲ, ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು.

ಮದುವೆಯಾಗುತ್ತಿದ್ದಂತೆ ಈ ಮಹಿಳೆ ತನ್ನಲ್ಲಿದ್ದ ಹಣವನ್ನೆಲ್ಲ ಗಂಡನಿಗೆ ನೀಡಿದ್ದಳು. ಆದರೆ ಹಣ ಕೈ ಸೇರುತ್ತಿದ್ದಂತೆ ಪತ್ನಿಯ ಮೇಲೆ, ತನ್ನ ಮನೆಯವರೊಂದಿಗೆ ಸೇರಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ನನಗೆ ಮೋಸವಾಗಿದೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net