ಗೋವಾದಲ್ಲಿ ಜೂ.24ರಿಂದ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ

HJS
Published on

ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯು 12ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಇದೇ ಜೂ.24 ರಿಂದ 30 ರವರೆಗೆ ಗೋವಾದಲ್ಲಿ ನಡೆಯಲಿದೆ.

ಗೋವಾ ರಾಜ್ಯದ ಪೊಂಡಾದ ರಾಮನಾಥ ದೇವಸ್ಥಾನದ ಶ್ರೀ ವಿದ್ಯಾಧಿರಾಜ ಸಭಾಗೃಹದಲ್ಲಿ ಹಮ್ಮಿಕೊಂಡಿರುವ ಅಧಿವೇಶನದಲ್ಲಿ ನೇಪಾಳ, ಶ್ರೀಲಂಕಾ, ಮಲೇಶಿಯಾ, ಬಾಂಗ್ಲಾದೇಶ, ಮತ್ತಿತರ ದೇಶದ ಸಂತರು, ಹಿಂದುತತ್ವನಿಷ್ಠ ಸಂಘಟನೆಯ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ.

ಜಗತ್ತಿನಾದ್ಯಂತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಲಕ್ಷಾಂತರ ಹಿಂದೂಗಳನ್ನು ಮೋಸದಿಂದ ಮತಾಂತರ ಮಾಡುವುದು, ಹಿಂದು ದೇವತೆಗಳನ್ನು ಚಲನಚಿತ್ರ, ಧಾರವಾಹಿ, ವೆಬ್ ಸಿರೀಸ್‌ಗಳಲ್ಲಿ ಅಪಹಾಸ್ಯ ಮಾಡುವುದು ಸೇರಿದಂತೆ ಹಿಂದು ವಿರೋಧ ಚಟುವಟಿಕೆಗಳ ನಿಯಂತ್ರಣದ ಕುರಿತು ಚರ್ಚೆ ಹಾಗೂ

ಭಾರತ ಹಿಂದೂ ರಾಷ್ಟ್ರವಾಗಬೇಕೆಂಬ ನಿಟ್ಟಿನಲ್ಲಿ ವ್ಯಾಪಕ ಪ್ರಯತ್ನಗಳ ಕುರಿತು ಅಧಿವೇಶನದಲ್ಲಿ ಚಿಂತನೆ ನಡೆಯಲಿದೆ ಎಂದು ಹಿಂಜಸ ಸಂಚಾಲಕ ಮಹಾವೀರ ಶ್ರೀಮಾಳ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net