ಕಾಫಿನಾಡಲ್ಲಿ ಗಣೇಶೋತ್ಸವಕ್ಕೂ ತಟ್ಟಿದ ಬರದ ಬಿಸಿ

19 ckm story 1 (1)
ತಾತ್ಕಾಲಿಕ ಕಲ್ಯಾಣಿ
Published on

ಚಿಕ್ಕಮಗಳೂರು: ಗಿರಿ ಶಿಖರಗಳ ನಾಡು ಜಲಪಾತಗಳ ತವರೂರು ಎಂದು ಖ್ಯಾತಿ ಪಡೆದ ಚಿಕ್ಕಮಗಳೂರಿನಲ್ಲಿ ಬರದ ಬಿಸಿ ಗಣೇಶೋತ್ಸವಕ್ಕೂ ತಟ್ಟಿದೆ. ವಾಡಿಕೆಗಿಂತ ಅರ್ಧದಷ್ಟು ಮಳೆಯಾಗದಿರುವುದರಿಂದ ಚಿಕ್ಕಮಗಳೂರು ತಾಲೂಕಿನಲ್ಲಿ ಗಣಪತಿ ವಿಸರ್ಜನೆಗೂ ಕೆರೆಗಳಲ್ಲಿ ನೀರಿಲ್ಲದಂತಾಗಿದೆ.
ಹೌದು, ಚಿಕ್ಕಮಗಳೂರು ನಗರ ವ್ಯಾಪ್ತಿಯ ಕೆರೆಗಳಲ್ಲಿ ನೀರಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಇತಿಹಾಸ ಪ್ರಸಿದ್ಧ ಬಸವನಹಳ್ಳಿ ದಂಟರಮಕ್ಕಿ ಕೆರೆಯಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂಬ ಕಾರಣಕ್ಕೆ ಕೆರೆ ನೀರನ್ನು ಖಾಲಿ ಮಾಡಲಾಗಿದೆ ಆದರೆ ಕೆರೆ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಕೆರೆ ಅಭಿವೃದ್ಧಿಯೂ ಇಲ್ಲ ನೀರು ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಈವರೆಗೆ ಇದೇ ದಂಟರಮಕ್ಕಿ ಕೆರೆಯಲ್ಲಿ ಚಿಕ್ಕಮಗಳೂರು ಹಿಂದೂ ಮಹಾ ಗಣಪತಿ ಸೇರಿದಂತೆ ಬಹುತೇಕ ಎಲ್ಲ ಗಣಪತಿಗಳ ವಿಸರ್ಜನೆ ನಡೆಯುತ್ತಿತ್ತು. ದಂಟರಮಕ್ಕಿ ಕೆರೆ ಹೊರತುಪಡಿಸಿ ಬೇರೆ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡೋಣವೆಂದರೆ ಅಲ್ಲಿಯೂ ಬರದಿಂದಾಗಿ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕೋಟೆ ಕೆರೆಯಲ್ಲೂ ಗಣಪತಿ ವಿಸರ್ಜನೆಕ್ಕೆ ಸಾಕಾಗುವಷ್ಟು ನೀರು ಸಂಗ್ರಹವಾಗಿಲ್ಲ. ನಗರದ ಹೊರವಲಯದ ಕೆಂಪನಹಳ್ಳಿ ಕೆರೆ, ಹಂಪಾಪುರ ಕೆರೆ, ನಲ್ಲೂರು ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದ್ದರೂ ಅಲ್ಲಿಗೆ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಹೋಗುವುದು ದೂರವಾಗಲಿದೆ. ಈ ಕಾರಣದಿಂದಾಗಿ ತಾತ್ಕಾಲಿಕ ಕಲ್ಯಾಣಿ ನಿರ್ಮಾಣ ಮಾಡಿ ಅದರಲ್ಲಿ ಗಣಪತಿಗಳ ವಿಸರ್ಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net