ವಿಷಪೂರಿತ ಆಹಾರ ಸೇವಿಸಿದ ರಷ್ಯಾ ಪ್ರತಿಪಕ್ಷ ನಾಯಕನ ಆರೋಗ್ಯ ಸ್ಥಿತಿ ಗಂಭೀರ

Russia
Published on

ಮಾಸ್ಕೊ: ರಷ್ಯಾದ ಪ್ರತಿಪಕ್ಷ ನಾಯಕರಲ್ಲೊಬ್ಬರಾದ ಅಲೆಕ್ಸಿ ನವಾಲ್ನಿ ಸೇವಿಸಿದ ಆಹಾರ ವಿಷಪೂರಿತವಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಸೈಬೀರಿಯಾದ ತೊಮ್ಸ್​ಕ್ ನಗರದಿಂದ ಮಾಸ್ಕೋಗೆ ವಾಪಸಾಗುತ್ತಿದ್ದಾಗ ವಿಮಾನದಲ್ಲೇ ಅಸ್ವಸ್ಥರಾದ ಅವರನ್ನು ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಶೌಚಗೃಹಕ್ಕೆ ಹೋಗಿದ್ದ ಅವರು ಪ್ರಜ್ಞಾಹೀನರಾಗಿ ಬಿದ್ದರು. ನವಾಲ್ನಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ವಿಮಾನ ವನ್ನು ಓಮ್ಸ್​ಕ್ ನಗರದಲ್ಲಿ ತುರ್ತಾಗಿ ಇಳಿಸಲಾಯಿತು. ವಿಷಪೂರಿತವಾದ ಆಹಾರ ಬಿಸಿ ದ್ರವದಿಂದಾಗಿ ಕ್ಷಿಪ್ರವಾಗಿ ದೇಹದಲ್ಲಿ ಸೇರಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ.

ಭ್ರಷ್ಟಾಚಾರ ವಿರೋಧಿ ಹೋರಾಟಗಾರ

44 ವರ್ಷದ ನವಾಲ್ನಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್​ರ ಕಟ್ಟಾ ವಿರೋಧಿಯಾಗಿದ್ದಾರೆ. ಆಡಳಿತಗಾರರ ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನವಾಲ್ನಿ, ‘ಭ್ರಷ್ಟಾಚಾರ ವಿರೋಧಿ ಪ್ರತಿಷ್ಠಾನ’ದ ಮುಖ್ಯಸ್ಥರಾಗಿ ದ್ದಾರೆ. ಅಧಿಕಾರಿಗಳು ಹಾಗೂ ಆಡಳಿತದ ಉನ್ನತ ಮಟ್ಟದಲ್ಲಿರುವ ಅವ್ಯವಹಾರಗಳನ್ನು ಬಯಲಿಗೆಳೆ ಯುವಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net