ಎರಡು ಕ್ಲಿನಿಕ್ ಬಂದ್ ಮಾಡಿಸಿದ ಆರೋಗ್ಯಾಧಿಕಾರಿ

08 SARAG 7
Published on

ಸರಗೂರು: ಪಟ್ಟಣದ ಖಾಸಗಿ ಆಸ್ಪತ್ರೆಗಳಿಗೆ ಇತ್ತೀಚೆಗೆ ತಾಲೂಕು ಆರೋಗ್ಯಾಧಿಕಾರಿ ಟಿ.ರವಿಕುಮಾರ್ ಹಾಗೂ ಅಧಿಕಾರಿಗಳ ತಂಡ ಭೇಟಿ ನೋಂದಣಿ ಮಾಡಿಸದ ಕ್ಲಿನಿಕ್ ಮುಚ್ಚಿಸಿದರು.


ವಿವೇಕಾನಂದ ಆಸ್ಪತ್ರೆ, ಖಾಸಗಿ ಕ್ಲಿನಿಕ್‌ಗಳಾದ ಗುರು ಹಾಗೂ ದರ್ಶನ್ ಕ್ಲಿನಿಕ್‌ಗೆ ಭೇಟಿ ಪರಿಶೀಲನೆ ನಡಸಿದರು. ಗುರು ಕ್ಲಿನಿಕ್ ಕೆಪಿಎಂಇ ನೋಂದಣಿ ಆಗದೆ ಇರುವ ಕಾರಣ ಹಾಗೂ ದರ್ಶನ್ ಕ್ಲಿನಿಕ್ ಪ್ರಮಾಣ ಪತ್ರ ನವೀಕರಣ ಇಲ್ಲದ ಕಾರಣ ಈ ಎರಡು ಕ್ಲಿನಿಕ್‌ಗಳನ್ನು ಬಂದ್ ಮಾಡಿಸಿದರು.


ಆರೋಗ್ಯಾಧಿಕಾರಿ ಟಿ.ರವಿಕುಮಾರ್ ಮಾತನಾಡಿ, ಸರಗೂರು ಮತ್ತು ಎಚ್.ಡಿ.ಕೋಟೆಯಲ್ಲಿ ತೆರೆದಿರುವ ಎಲ್ಲ ಖಾಸಗಿ ಕ್ಲಿನಿಕ್‌ಗಳು, ಪ್ರಯೋಗಾಲಯಗಳು ಕಡ್ಡಾಯವಾಗಿ ಕೆಪಿಎಂಇಎ ನೋಂದಣಿ ಮಾಡಿಸಿರಬೇಕು. ತಪ್ಪಿದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net